ನಾನು ಜೀವದಿಂದಿರುವ ದಿನವೆಲ್ಲ ನಿನ್ನ ಹೊಗಳಿ ಹಾಡುವೆ

ಕನ್ನಡ

ನಾನು ಜೀವದಿಂದಿರುವ ದಿನವೆಲ್ಲ ನಿನ್ನ ಹೊಗಳಿ ಹಾಡುವೆ ನನ್ನ ಪೂರ್ಣ ಮನಸ್ಸಿನಿಂದಲೆ ನಿನ್ನ ಎಂದಿಗೂ ಸ್ತುತಿಸುವೆ || || ನನಗಾಗಿ ಪ್ರಾಣ ಕೊಟ್ಟ ದೇವರು ನೀನೆ ನಿನ್ನ ಪ್ರೀತಿಯ ಬಿಟ್ಟು ಅಗಲಿ ನಾನೆಲ್ಲಿಗೆ ಹೋಗಲಿ ನನ್ನ ಜೀವಮಾನವೆಲ್ಲಾ ನಿನ್ನ ಸ್ತುತಿಸಿ ಹಾಡುವೆ ಕೊನೆಯವರೆಗೂ ಹೇಳುವೆ ಯೇಸು ಒಳ್ಳೆವನೆಂದು || ಒಳ್ಳೆಯವ ನೀನು ಒಳ್ಳೆಯವ ಒಳ್ಳೇದನ್ನೆ ನನಗೆ ಮಾಡುವವ ಒಳ್ಳೆಯವ ನೀನು ಒಳ್ಳೆಯವ ಒಳ್ಳೇದನ್ನೆ ನನಗೆ ಮಾಡುವವ 1.ನಾನು ಬದುಕಿ ಬಾಳಲೆಂದೆಒಪ್ಪಿಸಿಕೊಟ್ಟೆ ನಿನ್ನನೆ ಬಾಧೆಗೆ ಒಳಪಡಿಸಿದೆ ನಿನ್ನ ದೇಹವ ನನಗಾಗಿ || ನಿನ್ನ ಪ್ರೀತಿ ದೊಡ್ಡದು ನಿನ್ನ ಪ್ರೀತಿ ದೊಡ್ಡದು || ನಿನ್ನ ಪ್ರೀತಿಗೆ ಕೊನೆಯೇ ಇಲ್ಲ ನಿನ್ನ ಕೃಪೆಯು ದೊಡ್ಡದು ನಿನ್ನ ಕೃಪೆಯು ದೊಡ್ಡದು || ಕೃಪೆಯಾದ ಯೇಸುವೆ… || ಒಳ್ಳೆಯವ 2.ನನ್ನ ಪಾಪವ ನಿನ್ನ ದೇಹದಿ ಹೊತ್ತುಕೊಂಡು ತೀರಿಸಿದೆ ಹೊಡೆಸಿಕೊಂಡೆ ನೀ ನನ್ನ ರೋಗವ ನೀಗಲು || ನಿನ್ನ || 3.ಶಾಪದ ಮುಳ್ ಮುಕುಟವ ನಿನ್ನ ಶಿರಸಲ್ಲಿ ಹೊತ್ತುಕೊಂಡೆ ಶಾಪವಾದೆ ನೀ ನನ್ನ ಆಶೀರ್ವದಿಸಲು || ನಿನ್ನ ಪ್ರೀತಿ 4.ನನ್ನ ದರಿದ್ರವನ್ನು ನಿನ್ನ ಮೇಲೆ ಹೊತ್ತುಕೊಂಡೆ ನಿನ್ನ ಆಶೀರ್ವಾದ ನನ್ನ ಬಾಳಲ್ಲಿ ನೀಡಿದೆ || ನಿನ್ನ ||