ಕನ್ನಡ
ನಾನೇ ಮಾರ್ಗ ನಾನೇ ಸತ್ಯ ನಾನೇ ಜೀವ ಮಗನೇ (ಳೇ)
ನಾನಿಲ್ಲದೆ ನಿನಗೆ ಬಿಡುಗಡೆಯಿಲ್ಲ
ನಾನಿಲ್ಲದೆ ನಿನಗೆ ನೆಮ್ಮದಿಯಿಲ್ಲ
1. ನಾ ಕೊಡುವೆ ನಿನಗೆ ಸಮಾಧಾನ
ನಾ ಕೊಡುವೆ ನಿನಗೆ ಸಂತೋಷ
ಕಳವಳ ಬೇಡ ನನ್ ಮಗನೇ (ಳೇ)
ಕಣ್ಮಣಿಯಂತೆ ಕಾಯುವೆನು
2.ನಿನಗಾಗಿ ಜೀವವ ನೀಡಿರುವೆ
ನಿನಗಾಗಿ ರಕ್ತವ ಸುರಿಸಿರುವೆ
ನನ್ ಮಗನೇ (ಳೇ) ಬರುವೆಯಾ
ಹೃದಯದಲ್ಲಿ ಸ್ಥಳ ನೀಡುವೆಯಾ
3.ನಿನಗಾಗಿಯೇ ನಾ ಜೀವಿಸುವೇ
ನಿನ್ನಲ್ಲಿ ನೆಲೆಸಲು ತವಕಿಸುವೆ
ಬರುವೆಯಾ ನನ್ ಮಗನೇ (ಳೇ)
ಹೃದಯದಲ್ಲಿ ಸ್ಥಳ ನೀಡುವೆಯಾ
ನೀನೇ ಮಾರ್ಗ ನೀನೇ ಸತ್ಯ
ನೀನೇ ಜೀವ ಯೇಸಯ್ಯಾ
ನೀನಿಲ್ಲದೆ ನನಗೆ ಬಿಡುಗಡೆಯಿಲ್ಲ
ನೀನಿಲ್ಲದೆ ನನಗೆ ನೆಮ್ಮದಿಯಿಲ್ಲ
ನಂಬಿದ ಮನುಷ್ಯರು ಕೈ ಬಿಟ್ಟರೂ
ನೀನೆಂದು ನನ್ನನ್ನು ಕೈ ಬಿಡಲಾರೆ
ನನಗಾಗಿಯೇ ನೀ ಜೀವಿಸುವ
ನನ್ನಲ್ಲಿ ನೆಲೆಸಲು ತವಕಿಸುವೆ
ನನಗಾಗಿ ಜೀವವ ನೀಡಿರುವೆ
ನನಗಾಗಿ ರಕ್ತವ ಸುರಿಸಿರುವೆ