ಕನ್ನಡ
ನೀ ನನ್ನ ಆಶ್ರಯವು ನೀ ನನ್ನ ಕೋಟೆಯು
ನೀ ನ್ನ ಪ್ರಾಣನಾಥ ನೀ ನನ್ ದೇವ
ಆರಾಧಿಸುವೆ ಪೂರ್ಣ ಹೃದಯದಿಂದ
ಅರಸಿ ನಿನ್ ಮುಖ ಜೀವ ಮಾನವೆಲ್ಲ
ಸೇವೆ ಮಾಡುವೆ ನೀನೆ ಸರ್ವವೆಂದು
ದಾಸನು ನಾ – ದೇವ
ನೀ ನನ್ನ ರಕ್ಷಕನು ನೀ ನನ್ನ ವೈದ್ಯನು
ನೀ ನನ್ನ ಸಂತೃಪ್ತಿಯು ನೀ ನನ್ ದೇವ
ನೀ ನನ್ನ ಪಾಲಕನು ನೀ ನನ್ನ ಆಶ್ವಾಸನೆ
ನೀ ನನ್ನ ಮುಂಬಲವು ನೀ ನನ್ ದೇವ