ನೀನೆ ನನ್ನ ಯೇಸಯ್ಯಾ

ಕನ್ನಡ

ನೀನೆ ನನ್ನ ಯೇಸಯ್ಯಾ ನೀನೆ ನನ್ನ ಜೀವ ಜಲವು ಅಯ್ಯಾ ನೀನೆ ನನ್ನ ಜೀವನದಿಯು ಅಯ್ಯಾ ಒಣಗಿನ ಭೂಮಿ ನೀರನ್ನು ಹೀರುವ ಹಾಗೆ || 2 || ನನ್ನ ಆತ್ಮವು ನಿನಗಾಗಿ ಬಯಸಿದೆ || 2 || ಯೇಸಯ್ಯಾ ಯೇಸಯ್ಯಾ ನನ್ನ ಯೇಸಯ್ಯಾ || 2 || ನಿನ್ನ ಕಂಡು ಯೇಸಯ್ಯಾ ನನಗೆ ಆನಂದ || 2 || || ನೀನೆ ನನ್ನ || ಬಾಯಾರಿದ ಜಿಂಕೆ ನೀರನ್ನು ಹುಡುಕುವಂತೆ || 2 || ನನ್ನ ಮನವು ನಿನಗಾಗಿ ತವಕಿಸಿದೆ || 2 || ದೇವರೆ ದೇವರೆ ನನ್ನ ದೇವರೆ || 2 || ನನ್ನ ಆಂತರ್ಯ ನಿನಗಾಗಿ ಉಕ್ಕುತ್ತಿದೆ || 2 || || ನೀನೆ ನನ್ನ || ಮರುಭೂಮಿ ಯಾತ್ರೆಯಲ್ಲಿ ಕಣ್ಣನ್ನು ತೆರೆದೆ ದೇವಾ || 2 || ನನ್ನ ಹೃದಯವ ತೃಪ್ತಿ ಪಡಿಸಿದೆ || 2 || ಆರಾಧನೆ ಆರಾಧನೆ ನಿನಗೆ ಆರಾಧನೆ || 2 || ಜೀವದ ಬುಗ್ಗೆಯು ನೀನೆ ಯೇಸಯ್ಯಾ || 2 || || ನೀನೆ ನನ್ನ ||