ನೀನಿಲ್ಲದೆ ಬಾಳಿಲ್ಲ ಯೇಸುವೆ,

ಕನ್ನಡ

ನೀನಿಲ್ಲದೆ ಬಾಳಿಲ್ಲ ಯೇಸುವೆ, ನೀ ಸಾಕು ನನ್ನ ಬಾಳಿಗೆ (೨), ನೂರು ವರುಷ ಈ ಜಗದಿ ಬಾಳಿದರೆ ಏನು, ಒಂದಿವಸ ನಿನ್ ಜೊತೆಯಲಿ ಬಾಳುವುದೇ ಮೇಲು (೨), ಯೇಸುವೇ ನನ್ನ ಜೀವವೆ, ಯೇಸುವೆ ನನ್ನ ಪ್ರಾಣವೆ, ನೀ ನನ್ನ ಬಾಳಲ್ಲಿ ಬರದಿದ್ದರೆ, ನಾನೆಂದೊ ಮಣ್ಣಾಗಿ ಹೋಗುತ್ತಿದ್ದೆ (೨), ಸಂಕಟದ ಸಮಯದಲಿ ಸಂಗಡವಿದ್ದ, ಸರ್ವೇಶ್ವರ ನಿಮಗೆ ಸ್ತುತಿ ವಂದನೆ (೨), ಯೇಸುವೆ ಒಳ್ಳೆ ಕುರುಬನೆ, ನಿದ್ರಿಸದ ನನ್ನ ದೇವನೆ, ನಿನ್ನಿಂದ ದೂರಾದ ಕುರಿಮರಿ ನಾನು, ನನ್ನ ಹುಡುಕಿ ಬಂದಂತ ಕುರುಬನೆ ನೀನು (೨), ಮುಳ್ಳಿಂದ ರಕ್ಷಿಸಿದ ಕರುಣಾಮಯನೆ, ನಿನ್ನ ಮಹಿಮೆ ಎಂದೆಂದೂ ನಾ ಹಾಡುವೆ (೨), ಯೇಸುವೆ ಒಳ್ಳೆ ಕುರುಬನೆ, ನಿದ್ರಿಸದ ನನ್ನ ದೇವನೆ, ನೀ ನೋಡಲು ನನ್ನ ದುಃಖ ಮರೆಯಾಗಿದೆ, ನಿನ್ ಮುಖವ ನೋಡಲು ನನ್ ಮನ ಅರಳಿದೆ (೨), ನಿನ್ನ ಸನ್ನಿಧಿ ಬಾಳಿಗೆ ಹಿತ ತಂದಿದೆ, ನಿನ್ನ ಸ್ಪರ್ಷ್ ನನ್ನ ಬಾಳಿಗೆ ಶ್ರುತಿ ಕೂಡಿದೆ (೨), ಯೇಸುವೆ ಒಳ್ಳೆ ಕುರುಬನೆ, ನಿದ್ರಿಸದ ನನ್ನ ದೇವನೆ, ನಿಮ್ಮಿಂದ ದೂರಾಗಿ ನಾ ಬಾಳೆನು, ನಿಮ್ಮ ಮಡಿಲಲ್ಲಿ ಮಗುವಾಗಿ ನಾನಿರುವೆನು (೨), ಕರವಿಡಿದು ನಿಮ್ಮ ಹಿಂದೆ ನಾ ನಡೆವೆನು, ನಿಮ್ಮ ಪಾದವ ಇನ್ನೆಂದು ಬಿಡೆನು ದೇವ (೨), ಯೇಸುವೆ ಒಳ್ಳೆ ಕುರುಬನೆ, ನಿದ್ರಿಸದ ನನ್ನ ದೇವನೆ,