ನೊಂದವರ ಬದುಕಿನಲ್ಲಿ ಹೊಸ ಜೀವ ನೀಡಯ್ಯಾ

ಕನ್ನಡ

ನೊಂದವರ ಬದುಕಿನಲ್ಲಿ ಹೊಸ ಜೀವ ನೀಡಯ್ಯಾ ಕುಗ್ಗಿದ ಮನಸ್ಸಿಗೆ ಉಜ್ಜೀವನಗೊಳಿಸಯ್ಯಾ || 2 || ದೇವರೆ ನಿನ್ನಿಂದ ಉಂಟಾಗುವ ರಕ್ಷಣೆ ಯಾವಾಗ ಆಗುವದೆಂದೂ ನಿರೀಕ್ಷಿಸಿರವೆ || 2 || || ನೊಂದವರ || ನನ್ನ ವೇದನೆ ಅರಿತ ದೇವನೇ ಯೆಹೋವ ರಫಾ ಸೌಖ್ಯವ ನೀಡಿದೆ || 2 || || ನೊಂದವರ || ಯಾರ ಸಹಾಯ ಇಲ್ಲದೆ ಹೋದೆನು ನಿನ್ನ ಕೃಪ ಹಸ್ತದಿಂದ ಮೇಲೆ ಎತ್ತಯ್ಯಾ || 2 || || ನೊಂದವರ ||