ಪರಲೋಕ ತಂದೆಯೇ ನನ್ನಯ ಒಡೆಯ

ಕನ್ನಡ

ಪರಲೋಕ ತಂದೆಯೇ ನನ್ನಯ ಒಡೆಯ ದೂತರೂ ನಿತ್ಯವೂ ಆರಾಧಿಸುವಾತನೇ ಕೃತಜ್ಞತೆಯಿಂದ ನಿನ್ನ ಮುಂದೆ ವಂದಿಪೆ ಇಂದು… ಎಂದು ನೀ ಆರಾಧ್ಯನೇ ಪರಿಶುದ್ಧನು ನೀ ಸ್ತುತಿಗೆ ಪಾತ್ರನು ಸ್ತೋತ್ರಗಳಿಗೆಂದು ಯೋಗ್ಯನು ಆರಾಧನೆಯೂ ಸ್ತುತಿ ಗೌರವವು ಹೊಂದುವದಕ್ಕೆಂದು ನೀ ಯೋಗ್ಯನು 1.ಯೇಸುವೇ ಕರ್ತನೇ ನನ್ನಯ ರಕ್ಷಕಾ ದೂತರು ನಿತ್ಯವೂ ಆರಾಧಿಸುವಾತನೇ ಕೃತಜ್ಞತೆಯಿಂದ ನಿನ್ನ ಮುಂದೆ ವಂದಿಪೆ ಇಂದು ಎಂದು ನೀ ಆರಾಧ್ಯನೇ ||ಪರಿಶುದ್ಧನು ನೀ|| 2.ಪವಿತ್ರಾತ್ಮನೇ ನೀ ಸಂತೈಸುವಾತನೇ ದೂತರು ನಿತ್ಯವೂ ಆರಾಧಿಸುವಾತನೇ ಕೃತಜ್ಞತೆಯಿಂದ ನಿನ್ನ ಮುಂದೆ ವಂದಿಪೆ ಇಂದು ಎಂದು ನೀ ಆರಾಧ್ಯನೇ ||ಪರಿಶುದ್ಧನು ನೀ||