ಪರಲೋಕದಲ್ಲಿರುವ ನಮ್ಮ ತಂದೆಯೇ

ಕನ್ನಡ

ಪರಲೋಕದಲ್ಲಿರುವ ನಮ್ಮ ತಂದೆಯೇ ನಿನ್ನ ನಾಮ ಪರಿಶುದ್ಧವೆಂದು ಎಣಿಸಲ್ಪಡಲಿ ||2|| ನಿನ್ನ ರಾಜ್ಯವು ಬರಲಿ ನಿನ್ನ ಚಿತ್ತವು ನೆರವೇರಲಿ ||2|| 1.ಪರಲೋಕದಲ್ಲಿ ನಿನ್ನ ಚಿತ್ತವು ನೆರವೇರುವ ಹಾಗೆ ಭೂಲೋಕದಲ್ಲಿಯೂ ನೆರವೇರಲಿ ||2|| ನಮ್ಮ ಅನುದಿನದ ಆಹಾರವು ಈ ಹೊತ್ತು ನಮಗೆ ದಯಪಾಲಿಸು ನಾವು ಶೋಧನೆಗೆ ಸೇರದಂತೆ ಎಲ್ಲಾ ಕೇಡಿನಿಂದ ತಪ್ಪಿಸು ||2|| 2.ಎಲ್ಲ ದೇಶದ ಅಂದಕಾರವು ನೀಗಿ ಹೋಗಲಿ ಸಮಾಧಾನದ ಶುಭವಾರ್ತೆ ಸಾರಲ್ಪಡಲಿ ||2|| ಈ ಭಾರತ ದೇಶವು ನಿಮಗೆ ಸ್ವಂತವಾಗಲಿ ಕೋಟಿ ಕೋಟಿ ಜನಗಳಿಗೆ ರಕ್ಷಣೆ ಎಂಬ ಕಿರೀಟ ಒದಗಲಿ ||2|| 3.ಎಲ್ಲ ಸಭೆ ಸೇವಕರ ಮನಸ್ಸು ಒಂದಾಗಿರಲಿ ಕರೆದಾತನೆ ಕಾರ್ಯಮಾಡಿ ಪೂರೈಸಲಿ ||2|| ಅವರು ಭೂಮಿಗೆ ಉಪ್ಪಾಲಿ ಲೋಕಕ್ಕೆ ಬೆಳಕಾಗಲಿ ನಿತ್ಯ ಜೀವಕ್ಕಾಗಿ ದುಡಿದು ಪರಲೋಕ ರಾಜ್ಯ ಸೇರಲಿ ||2||