ಪರ್ವತಗಳನ್ನು ನೋಡದೆ

ಕನ್ನಡ

ಪರ್ವತಗಳನ್ನು ನೋಡದೆ ಯೆಹೋವನನ್ನೆ ನೋಡುವೆ ಅಲ್ಲಿಂದ ಸಹಾಯ ನನಗೆ ಸಿಗುವುದಿ || ಹಲ್ಲೆಲೂಯ || (8) 1.ನನ್ನನ್ನು ಕಾಯುವ ದೇವರು ತೂಕಡಿಸನು ನಿದ್ರಿಸನು ನನ್ನ ಬಲಗಡೆಯಲ್ಲಿ ನಿಂತಿರುವನು ಯೆಹೋವನು (2) ಹಗಲಲ್ಲಿ ಸೂರ್ಯನು ಇರುಳಲ್ಲಿ ಚಂದ್ರನು ನನ್ನನ್ನು ಬಾದಿಸನು ನನ್ ಪ್ರಾಣ ಕಾಯುತ್ತಿರುವನು… || ಹಲ್ಲೆಲೂಯ || (8) 2.ಇಕ್ಕಟ್ಟಿನಲ್ಲಿ ನನ್ನ ಸಹಾಯಕನು ಪರಿಹಾರಕನು ಆಪತ್ತಿನಲ್ಲಿ ನನ್ನ ಕಾಯುವನು ನಡೆಸುವನು (2) ನನ್ನೆಲ್ಲಾ ದಾರಿಗಳನ್ನು ಸರಾಗ ಮಾಡುವನು ನಿಶ್ಚಯದಿ ಶುಭವು ಕೃಪೆಯು ನನ್ನನ್ನು ಹಿಂಬಾಲಿಸುವುದು… || ಹಲ್ಲೆಲೂಯ || (8)