ಕನ್ನಡ
ರಿಶುದ್ದ ತಂದೆಗೆ ನಾವು ಸ್ತುತಿಹಾಡೋಣ ಆತನೇ ಜೀವವು ಕೊಟ್ಟವನು ರೋಗ ವಾಸಿ ಮಾಡುತ್ತಾನೆ ಪಾಪಗಳೆಲ್ಲವೂ ಕ್ಷಮಿಸುತ್ತಾನೆ
ತಾಯಿಯಂತೆ ನಮ್ಮನು ಸಲಹುವನು ಆಪಯ ಸಮಯದಲ್ಲಿ ಕಾದಿದನು ಅನ್ನ ಪಾನಗಳ ನೀಡಿದಾತನು ನಿತ್ಯ ಜೀವವು ಸಹ ಕೊಟ್ಟಿದ್ದಾನೆ
ಕುರುಬನಂತೇ ನಮ್ಮನ್ನು ಹುಡುಕಿ ಬಂದು ಪಾಪದ ಗುರಿಯಿಂದ ಎತ್ತಿದಾತನು ಅವರದಾಗಿ ನಮ್ಮನ್ನು ಮಾಡಲಿಕ್ಕೇ ಅವರೇ ರಕ್ತವ ಸುರಿಸಿದರು
ಗೂಡುಗಳಿಂದ ಸಹ ಹೊರಡಿಸಿ ಹಾರುವುದು ನಮಗೆ ಕಲಿಸಿಕೊಟ್ಟು ರೆಕ್ಕೆಗಳ ಮೇಲೆ ಎತ್ತಿದಾತನು ನೆಲಕ್ಕೇ ಬಿದ್ದು ನಾವು ನಾಶವಾಗದೇ
ಸ್ತೋತ್ರ ಹಾಡೋಣ ಹೃದಯದೊಳಗಿಂದಾ ಮೊಣ ಕಾಲೂರಿರಿ ವಿನಯದಿಂದ ಹಲ್ಲೆಲ್ಲೂಯ ಹಾಡೋಣ ಹರ್ಷದಿಂದ ಆತನೆ ನಮ್ಮಯ ರಕ್ಷನಬಂಡೇ