ಪರಿಶುದ್ದಾತ್ಮನೆ ಇಳಿದು ಬಾ ದೇವಾ

ಕನ್ನಡ

ಪರಿಶುದ್ದಾತ್ಮನೆ ಇಳಿದು ಬಾ ದೇವಾ ನೊಂದ ಹೃದಯವ ಸಂತೈಸು ಬಾ ದೇವಾ ಸತ್ಯದ ಆತ್ಮನೆ ಹಾದಿಯ ತೋರು ದೇವಾ ನನ್ನ ಯೆಸುವಿಗಾಗಿ ಜೀವಿಸ ಮಾಡು ದೇವಾ ||2||ಪರಿಶುದ್ದಾತ್ಮನೆ || 1.ಪ್ರಿಯ ಯೇಸುವನ್ನು ಜೀವಿತನಾಗಿ ಎಬ್ಬಿಸಿದಾತನ ಆತ್ಮನೇ ನನ್ನಾಯ ಮತ್ರ್ಯದೇಹವನ್ನು ಬಲಪಡಿಸಿ ನವ ಜೀವನವ ನೀಡು ದೇವರ ಆತ್ಮನೇ ||2|| ||ಪರಿಶುದ್ದಾತ್ಮನೆ|| 2.ನನ್ನಾಯ ಜೀವಿತದ ಬಲಹಿನತೆಯ ಪ್ರತಿ ವಿಜ್ಞಾಪಿಸಿ ನಿಗಿಸು ಕರ್ತನಾ ಆಗಾಧ ಮನವನ್ನು ಪರಿಶೊಧಿಸಿ ಆತನ ಚಿತ್ತಾನುಸಾರವಾಗಿ ರೂಪಿಸು ||2|| ||ಪರಿಶುದ್ದಾತ್ಮನೆ|| ಹಾ…ಹಲ್ಲೆಲೂಯಾ ||8|| 3.ಪೂರ್ಣನೇ ಪರಿಪೂರ್ಣನೇ ನ್ಯಾಯ ಸಂಪೂರ್ಣನೆ ||2|| ನಿನ್ನಾರಾಧೀಸುವೇ ಹಾಡುವೆ ಕೊಂಡಾಡುವೆ ||2|| ಹಾ…ಹಲ್ಲೆಲೂಯಾ ||8||