ಪರಿಶುದ್ಧನೇ ಯೆಹೋವನೇ ನಿನ್ನಲ್ಲೆ ಸಂತೋಷಿಸುವೆ

ಕನ್ನಡ

ಪರಿಶುದ್ಧನೇ ಯೆಹೋವನೇ ನಿನ್ನಲ್ಲೆ ಸಂತೋಷಿಸುವೆ ನಾ ನಿನ್ನಲ್ಲೆ ಹರ್ಷಿಸುವೆ || ಪರಿಶುದ್ಧನೇ || 1.ನನ್ನ ಸುಖವು ನಿನ್ನಲ್ಲೆ ಹೊರತು ಬೇರೆ ಇಲ್ಲಾ ಯೆಹೋವನೇ || ಬೇಕೆಂದು ಪಾಪಗಳ ಮಾಡದ ಹಾಗೆ ನನ್ನ || ಕಾಪಾಡು ಕರುಣಾಮಯನೇ ಕಾಪಾಡು ಪರಿಶುದ್ಧನೇ || ಪರಿಶುದ್ಧನೇ || 2.ನನ್ನ ಜೊತೆಗಾರರಿಗಿಂತಲೂ ಉನ್ನತ ಸ್ಥಾನಕ್ಕೆ ಏರಿಸಿದೆ || ಆನಂದ ತೈಲದಿಂದ ಅಭಿಷೇಕ ಮಾಡಿರುವೆ || ನಿನ್ನಲ್ಲಿ ಸಂತೋಷಿಸುವೆ || ಪರಿಶುದ್ಧನೇ || 3.ನಿನ್ನನ್ನು ಬಿಟ್ಟು ಇನ್ಯಾರ ಬಳಿಗೆ ನಾ ಹೋಗಲಿ…ಯೇಸುವೇ || ನಿತ್ಯಜೀವವನು ನನಗೆ ನೀಡಿರುವೇ || ನಿನ್ನಲ್ಲೇ ಆಶ್ರಯಿಸುವೆ ನಿನ್ನಲ್ಲೇ ಹರ್ಷಿಸುವೆ || ಪರಿಶುದ್ಧನೇ ||