ಪ್ರೀತಿಯ ನನ್ ದೇವನೆ

ಕನ್ನಡ

ಪ್ರೀತಿಯ ನನ್ ದೇವನೆ ಪ್ರೀತಿಸ್ವರೂಪನು ನೀನೆ ನಿನ್ನ ಸ್ತುತಿಸುವೆನು ನಿನ್ನ ಹೊಗಳುವೆನು ನಿನ್ನಾಮ ಕೊಂಡಾಡುವೆ || 1 ) ಎಂದೆಂದೂ ನಿನ್ನನ್ನು ಹಾಡುವೆ ನನ್ ಪ್ರಿಯ ಯೇಸುವೆ ಪ್ರೀತಿಯಿಂದ ನಿನ್ನ ನೋಡುವೆ ಪೂರ್ಣ ಹೃದಯದಿಂದ || 2 ) ಕಳೆದ ದಿನವೆಲ್ಲಾ ಕಣ್ಮಣಿಯಂತೆ ನನ್ನ ಕಾದವನೇ ನಿನ್ನ ಸ್ತುತಿಸುವೆನು ಇದುವರೆಗೂ ಕಾದಂತಹ ಎಬಿನೇಸರೆ ಮುಂದೆಯು ನನ್ನನ್ನು ನಡೆಸುವನು || 3 ) ನೀ ನನ್ನ ಪರವಾಗಿ ಎಂದೆಂದೂ ಇರುವಾಗ ಕೇಡು ನನ್ನನ್ನು ಮುಟ್ಟದಯ್ಯ ಯೆಹೋವ ನಿಸ್ಸಿಯೇ ನಿನ್ನ ನಾಮವೇ ಎಂದೆಂದೂ ನನಗೆ ಜಯ ಕೊಡುವೆ ||