ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ

ಕನ್ನಡ

ಪ್ರೀತಿಸುವೆ ಯೇಸು ರಾಜ ಜೀವಂತ ದಿನವೆಲ್ಲ ನಿನ್ನ ಪ್ರೀತಿಯೊಂದೆ ಸಾಕು ಬಾಳಿನ ದಿನವೆಲ್ಲ (2) ಸಾಕಯ್ಯಾ ನಿನ್ ಪ್ರೀತಿ ಸಾಕಯ್ಯಾ ಬೇಕಯ್ಯಾ ನಿನ್ ಕೃಪೆ ಬೇಕಯ್ಯಾ (2) ಲೋಕವೆಲ್ಲಾ ತಿರುಗಾಡಿ ಬಂದೆ ಯೇಸಯ್ಯಾ ನಿನ್ನಂತ ತಂದೆ ಎಲ್ಲೂ ಸಿಗಲಿಲ್ಲ ನನ್ನಯ್ಯಾ (2) ನೀನೇನೆ ನನ್ನಯ ಒಡೆಯ ನೀನಿಲ್ದೆ ಈ ಜೀವವಿಲ್ಲಯ್ಯಾ (2) ಪ್ರೀತಿಸುವೆ ಯೇಸುರಾಜ ಹಗಲೆಲ್ಲ ಮೇಘಸ್ತಂಭವಾಗಿ ನೀ ಬಂದೆ ಇರುಳೆಲ್ಲಾ ಅಗ್ನಿಸ್ತಂಭವಾಗಿ ನೀ ನಡೆದೆ (2) ನೀನೇನೆ ನನ್ನಯ ಗೆಳೆಯ ಕೈ ಹಿಡಿದು ನಡೆಸಿದ ಇನಿಯಾ (2) ಪ್ರೀತಿಸುವೆ ಯೇಸುರಾಜ ತಂದೆ ತಾಯಿ ನನ್ನನ್ನು ತಳ್ಳಿದರೇನಯ್ಯಾ ನೀ ನನ್ನ ಸೇರಿಸಿಕೊಂಡ್ರೆ ಅಷ್ಟೆ ಸಾಕಯ್ಯಾ (2) ನೀನೆನೆ ನನ್ನಯ ತಾಯಿಯು ನನ್ನನು ಪ್ರೀತಿಸೊ ತಂದೆಯು (2) ಪ್ರೀತಿಸುವೆ ಯೇಸುರಾಜ