ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು

ಕನ್ನಡ

ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು ಪರಲೋಕದಿ ನಿನಗೊಂದು ಸ್ಥಳವಿರಬೇಕು ಯೇಸು ನೀಡುವ ಇಂದೇ ನೀಡುವ ಅದಕ್ಕಾಗಿಯೇ ಶಿಲುಬೆಯಲ್ಲಿ ರಕ್ತ ಸುರಿಸಿದ 1.ಮೊದಲು ಹುಡುಕು ಪರಲೋಕ ರಾಜ್ಯವನ್ನು ಬೇರೆ ಎಲ್ಲವನ್ನು ಆತನೆ ಸೇರಿಸಿ ಕೊಡುವನು 2.ನೊಂದು ಬೆಂದು ಭಾರ ಹೊತ್ತು ಬಳಲಿರುವೆಯಾ ನಿನ್ನ ಬಿಡಿಸಬಲ್ಲ ಕರ್ತನ ಬಳಿಗೆ ಬರುವೆಯಾ 3.ನೀ ಹುಡುಕುವ ನೆಮ್ಮದಿ ಕ್ರಿಸ್ತನಲ್ಲುಂಟು ಇಂದುನೀ ಬಯಸುವ ಬಿಡುಗಡೆ ಆತನಲ್ಲುಂಟು 4.ರಕ್ತ ಧಾರೆಇಲ್ಲದೆ ಪಾಪಕ್ಷಮೆ ಇಲ್ಲ ಯೇಸು ರಾಜ ನಾಮವಿಲ್ಲದೆ ರಕ್ಷಣೆಇಲ್ಲ