ಕನ್ನಡ
ಪುಟ್ಟೂರಿನ ಪುಟ್ಟ ಸಭೆಯ ಮಕ್ಕಳ ನಾವು
ಪುಟ್ಟದಾದ ಸಾಕ್ಷಿಯೊಂದು ಹೇಳುವೆವು
ಬಲು ಚೆಂದವಾದ ಸಾಕ್ಷಿಯೊಂದ ಹೇಳುವೆವು
1.ಚಿಕ್ಕ ಪ್ರಾಯದಲ್ಲಿ ನಾವು ಯೇಸುವನ್ನು ಪ್ರೀತಿಸಿ
ನಮ್ಮ ಹೃದಯವನ್ನು ನಾವು ಯೇಸುವಿಗೆ ಒಪ್ಪಿಸಿ
ಯೇಸು ನಮ್ಮ ದ್ರಾಕ್ಷೆಬಳ್ಳಿ ನಾವು
ಕೊಂಬೆಗಳಾಗಿ
ಹೆಚ್ಚು ಹೆಚ್ಚು ಫಲವನ್ನು ಕೊಡುತ
ತಂದೆಗೆ ಮಹಿಮೆಯ ತರುವವರಾಗಿ
ಪುಟ್ಟೂರಿನ ಪುಟ್ಟ ಸಭೆಯ ಮಕ್ಕಳ ನಾವು
ಪುಟ್ಟದಾದ ಸಾಕ್ಷಿಯೊಂದು ಹೇಳುತ್ತಿರುವೆವು
2.ಎಡವಿ ಬೀಳದಂತೆ ದೇವ ವಾಕ್ಯವನ್ನು ಧ್ಯಾನಿಸಿ
ಕುಗ್ಗಿ ಹೋಗದಂತೆ ಪ್ರತಿ ದಿನವು ನಾವು ಪ್ರಾರ್ಥಿಸಿ
ಮರಭೂಮಿಯಲ್ಲಿ ಬೆಳೆಯುವರಾಗಿ ಬಿಸಿಲಿನಲ್ಲಿ
ನಗುವವರಾಗಿ
ಸುಗಂಧ ಪರಿಮಳ ಬೀರುವವರಾಗಿ ಶಾರೋನಿನ
ಹೂವುಗಳಾಗಿ
ಪುಟ್ಟೂರಿನ ಪುಟ್ಟ ಸಭೆಯ ಮಕ್ಕಳ ನಾವು
ಪುಟ್ಟದಾದ ಸಾಕ್ಷಿಯೊಂದ ಹೇಳಿದೆವು
ಬಲು ಚೆಂದವಾದ ಸಾಕ್ಷಿಯೊಂದ ಹೇಳಿದವು