ಬದುಕೆನ್ನ ಬರುದಾಗಿದೆ ಚಿಂತೆಯಲ್ಲಿ ಚಿತೆಯಾಗಿದೆ

ಕನ್ನಡ

ಬದುಕೆನ್ನ ಬರುದಾಗಿದೆ ಚಿಂತೆಯಲ್ಲಿ ಚಿತೆಯಾಗಿದೆ ದೇವಾಧಿ ದೇವ ಜೀವಕ್ಕೆ ಎನ್ನ ಕೃಪೆಯನ್ನ ನೀ ಕರುಣಿಸು ಬದುಕೆನ್ನ ಬರುದಾಗಿದೆ ಚಿಂತೆಯಲ್ಲಿ ಚಿತೆಯಾಗಿದೆ 1.ಕನಸೊಂದು ಕಂಡೆ ಮುಗಿಲೇರಿ ನಿಂತೆ ನಿನ್ನನ್ನೇ ನಾ ಹುಡುಕಿದೆ ಕಷ್ಟದಲ್ಲಿ ಬೆಂದೆ ಪಾಪದಲ್ಲಿ ಮೆರೆದೆ ನಿನ್ನಿಂದ ನಾ ದೂರಾದೆ ನಿನ್ನನ್ನೇ ನಾ ಹುಡುಕಿದೆ ಅಭಯವ ನೀಡಿ ಕರುಣೆಯ ತೋರಿ ಕೈ ಹಿಡಿದು ನೀ ನಡೆಸಯ್ಯಾ (ಬದುಕೆನ್ನ) 2.ಲೋಕದ ಆಸೆ ಅತಿ ಆಸೆಗಳಿಗೆ ಒಳಗಾಗಿ ಸೋತು ಹೋದೆ ಲೋಕದ ಕಡೆಗೆ ಮುಖ ಮಾಡಿದೆ ನಾ ನಿನ್ ಕೃಪೆಯ ಕಳೆದುಕೊಂಡೆ ಲೋಕದ ಆಸೆ ಅತಿ ಆಸೆಗಳಿಗೆ ಒಳಗಾಗಿ ಸೋತು ಹೋದೆ ಕರುಣಾ ಮೂರ್ತಿಯೇ ಪರಿಶುದ್ದ ಆತ್ಮನೇ ಆಧರಿಸಿ ನೀ ನಡೆಸಯ್ಯಾ – (ಬದುಕೆನ್ನ)