ಬದುಕು ಬಾಳಿನ ಡಂಬ ಈ ಬದುಕು ಬಾಳಿನ ಡಂಬ

ಕನ್ನಡ

ಬದುಕು ಬಾಳಿನ ಡಂಬ ಈ ಬದುಕು ಬಾಳಿನ ಡಂಬ ಬದುಕು ಬಾಳಿನ ಡಂಬ ಎಳಿತೈತಿ ಮಾನವನ 1.ಕೋಟ್ಯಾದಿಪತಿಯಂತ ಇವರು ಕೋಟ್ಯಾದಿಪತಿಯಂತ ಹೇಳ್ತರಪ್ಪ ಕೋಟಿ ಸುಳ್ಳು ಲೆಕ್ಕಾಚಾರವಂತ ಮನೆಯವರಿಗೆ ಮೋಸಮಾಡಿ ಮನಸ್ಸ ಕೊಲ್ಲತಾರಾ (ಬದುಕು) 2.ಕಟ್ಟರ ನೋಟಿನ ಸರಣಿ ತುಂಬ್ತಾರ ಕಾಳಿನ ಭರಣಿ ಮಗ್ಗಳದಾಗ ನಿಂತೈತಿ ನೋಡೋ ಮುಸುಕು ಹಾಕಿದ ಮರಣ ಮಣ್ಣಿನೊಳಗೆ ನೀ ಸೇರಿದ ಮ್ಯಾಲೆ (ಬದುಕು) ಎಲ್ಲೋತೋ ನಿನ್ನ ಸರಣಿ ಭರಣಿ 3.ಯೇಸು ಸ್ವಾಮಿಯ ನಂಬೊ ನೀ ಯೇಸು ಸ್ವಾಮಿಯ ನಂಬೊ ಸತ್ತರೂ ನೀನು ಬದುಕುವಿ ಎಂದು ಹೇಳತಾರ ಯೇಸು ಮೋಕ್ಷವ ನೀಡಿ ವಜ್ರ ಕಿರೀಟವ ತೊದಿಸುವನು ನಿನಗೆ (ಬದುಕು)