ಬನ್ನಿರಿ ಹಾಡೋಣ ಜಯಘೋಷ ಮಾಡೋಣ

ಕನ್ನಡ

ಬನ್ನಿರಿ ಹಾಡೋಣ ಜಯಘೋಷ ಮಾಡೋಣ ಕರ್ತನ ಸನ್ನಿಧಿ ಸೇರೋಣ ಕೀರ್ತನೆ ಹಾಡುತ್ತ ನಮಿಸೋಣ || ಹಾಡಿಪಾಡಿ ನಲಿಯೋಣ ಕೀರ್ತನೆ ಹಾಡುತ ನಮಿಸೋಣ ಕೈಯ ತಟ್ಟಿ ಹಾಡೋಣ ಸರ್ವಶಕ್ತಿಯಿಂ ಹಾಡೋಣ || 1 ) ದೇವಾಧಿ ದೇವಾ ನನ್ನೇಸು ರಾಜಾಧಿ ರಾಜಾ ನನ್ನೇಸು ಉನ್ನತ್ತೋನ್ನತ ನನ್ನೇಸು ಲೋಕಪಾಲಕ ನನ್ನೇಸು || 2 ) ನಂಬಿಗಸ್ತನು ನನ್ನೇಸು ಐಶ್ವರ್ಯದಾಯಕ ನನ್ನೇಸು ಪರಿಶುದ್ಧ ದೇವನು ನನ್ನೇಸು ಸ್ತುತಿಗೆಯೋಗ್ಯನು ನನ್ನೇಸು || 3 ) ವೈದ್ಯರ ವೈದ್ಯ ನನ್ನೇಸು ಆರೋಗ್ಯದಾಯಕ ನನ್ನೇಸು ಸರ್ವಶಕ್ತನು ನನ್ನೇಸು ಅತಿಶಯ ಮಾಡುವ ನನ್ನೇಸು ||