ಬಲದಿಂದಲ್ಲಾ ಪರಾಕ್ರಮದಿಂದಲ್ಲಾ

ಕನ್ನಡ

ಬಲದಿಂದಲ್ಲಾ ಪರಾಕ್ರಮದಿಂದಲ್ಲಾ ಯೆಹೋವನ ಆತ್ಮನಿಂದಲೇ ಯುದ್ದ ಮಾಡುವೇ ನಾ ಹೋರಾಡುವೇ ಆನುದಿನ ಜಯ ಹೊಂದುವೇ ಜಯವೇ ನಮಗೆ ಜಯವೇ ಜಯವು ಜಯದ ಜೀವಿತವು ನಮಗೇ ಸಾವಿರಾರು ಶತ್ರುಗಳು ಎದ್ದರೇನೂ ಲೋಕವೆ ಎದುರಾಗಿ ನಿಂತರೇನೂ ಕಳವಳ ಗೊಳ್ಳಲಾರೆ ನಾನೆಂದೂ ಯೆಹೋವನೆ ಯುದ್ದ ಮಾಡಿ ಜಯ ನೀಡ್ವನು ಒಂದೇ ದಾರಿಯಲ್ಲಿ ಶತ್ರು ಬಂದರೇನೂ ಏಳು ದಾರಿಯಲ್ಲಿ ಓಡಿ ಹೋಗುವನೂ ಐಗುಪ್ತರೂ ಇನ್ನು ಕಾಣಲಾರರೂ ಶತ್ರುವಿನ ಸೈನ್ಯ ಬಳಿಬರದು ಸರ್ವಾಯುಧವನ್ನು ನಾನು ಧರಿಸಿಕೊಂಡೇ ಪವಿತ್ರಾತ್ಮ ಶಕ್ತಿಯಿಂದ ತುಂಬಿಸಲ್ಪಟ್ಟೇ ಸೈತಾನನ ತಂತ್ರೋಪಾಯ ಎದುರಿಸುವೇ ಸ್ತುತಿಯಿಂದ ಸೈತಾನ್ ಕಾರ್ಯ ಸರ್ವ ನಾಶವೇ