ಬಾ ಯೇಸುವಲ್ಲಿ ಬಾ,

ಕನ್ನಡ

ಬಾ ಯೇಸುವಲ್ಲಿ ಬಾ, ನಿನ್ನ ಹೃದಯವ ಯೇಸುವಿಗೆ ತಾ, ನಿನ್ನ ಕಾಯುವ ಕುರುಬನವ (೨), ಹುಟ್ಟಿದಾಗ ಏನು ಹೊತ್ತು ತಂದೆ, ಸತ್ತಾಗೇನು ಕೊಂಡುಹೋಗುವೆ ನೀನು (೨), ಎಲ್ಲಿಂದ ಬಂದೆ ನೀ ಈ ಜಗಕೆ, ಎಲ್ಲಿ ಹೋಗಬೇಕು ನಿನಗೆ ಗೊತ್ತೆ? (೨) ||ಬಾ ಯೇಸುವಲ್ಲಿ ಬಾ|| ಪ್ರೇಮಕ್ಕಾಗಿ ಅಲೆದು ಸೋತೆ ನೀನು, ನಂಬಿದವರ ಪ್ರೇಮವೆಲ್ಲ ಸುಳ್ಳು (೨), ಜೀವಕೊಟ್ಟ ಪ್ರೇಮ ಉಂಟು ನೋಡು, ಶಿಲುಬೆ ಮರಣ ಸತ್ಯ ಪ್ರೇಮ ಕಾಣು (೨) ||ಬಾ ಯೇಸುವಲ್ಲಿ ಬಾ|| ಹಣದ ಹಿಂದೆ ಓಡಿದ್ದು ನೀ ಸಾಕು, ಮರಣ ಬರಲು ಹಣವದೆಲ್ಲ ದೂಳು (೨), ಯೇಸುವಿನ ಹಿಂದೆ ಬೇಗ ಓಡು, ನಿತ್ಯಜೀವ ದಕ್ಕುತ್ತಾಗ ನೋಡು (೨) ||ಬಾ ಯೇಸುವಲ್ಲಿ ಬಾ|| ನಾನು ಎಂಬ ಅಹಂಕಾರ ಸಾಕು, ಆರು ಅಡಿ ಮಣ್ಣು ಕೊನೆಗೆ ನೋಡು (೨), ಸ್ಥಾನ ಮಾನ ಸ್ಥಿರವಲ್ಲ ನೋಡು, ದೀನರಲ್ಲಿ ಯೇಸುವನ್ನು ಕಾಣು (೨) ||ಬಾ ಯೇಸುವಲ್ಲಿ ಬಾ||