ಕನ್ನಡ
ಬಾಳೆಂಬ ಕಡಲಲ್ಲಿ ದೃಢವಾಗಿರು ಮನುಜನೇ
ನಗು ನಗುತ ಹಸನ್ ಮುಖದಿ
ತಂದೆ ದೇವರ ಸ್ಮರಿಸುನೀ ಸ್ಮರಿಸುನೀ ಸ್ಮರಿಸುನೀ
1.ಕರುಣಿಯ ದೇವನು ಕರುಣಿಸಿ ನಡೆಸಿದ
ಶ್ರೇಸ್ಠವರದಿಂದ ಪ್ರೀತಿ ಕೃಪೆಯಿಂದ
ನಿನ್ನ ಆಶ್ರಯ ಪೂರೈಸಿದ
ತಂದೆ ದೇವನ ಸ್ತುತಿಸುತ
ಬಜಿಸುತ ಹಾಡುವ – ಬಾಳೆಂಬ
2.ಧರೆಯ ದುರಿತಗಳ ದಹಿಸಿ ನೀ ಹರಸು
ಸುಖ ಸಂತೋಷವ ನವ ಚೈತನ್ಯವ
ಚಿರ ಸೌಭಾಗ್ಯವ ಪರಮಾನಂದವ
ನೀ ನೀಡಿ ಹರಸಯ್ಯಾ
ಕೈ ಹಿಡಿದು ನಡಸಯ್ಯಾ – ಬಾಳೆಂಬ
3.ಬದುಕು ಬೆಳಕಾಗಿ ಜೀವನ ಜೇನಾಗಿ
ಸತ್ಯ ದೇವರ ನಿತ್ಯ ಪ್ರಕಾಶವು
ಪವಿತ್ರತ್ಮ ಸರ್ವ ತೇಜಸ್ಸು
ನಿನ್ನಲ್ಲಿ ಹೊಳೆಯಲಿ
ಎಂದೆಂದೂ ಬೆಳಗಲಿ – ಬಾಳೆಂಬ