ಕನ್ನಡ
ಬೇಕೆನಗೆ ಭೂಯಾತ್ರೆಯೊಳು ನಿನ್ ಬೆಳಕು
ತಡವರಿಸದೆ ನಾ ನಿನ್ನೆಡೆಗೆ ಬರಗೊಡಿಸು ದೇವಾ
1.ಜ್ಯೋತಿಯು ನೀ ಸತ್ಯವು ನೀ
ಮಾರ್ಗವು ನೀ ನನ್ನ ಶಾಂತಿಯು ನೀ
ನಿನ್ ಹೊರತೂ ಬೇರಿಲ್ಲ
ಆತ್ಮದ ಬೆಳಕು ನೀ ಮಾತ್ರ
2.ಮರುಗುವನು ಕರೆಯುವನು
ತೊರೆಯದೆ ಬಾ ನೀ ಅವನೆಡೆಗೆ
ತೋರುವ ನಿನಗವ ಹೊಸ ಬೆಳಕು
ಅನುಭವಿಸು ಆ ನವಜೀವ
3.ಸ್ವೀಕರಿಸು ಹೃದಯದೊಳು
ಕತ್ತಲು ಮಾರ್ಗವ ನೀ ತ್ಯಜಿಸು
ನಂಬಿದರೆ ವಾಕ್ಯದೊಳು
ಕಾಣುವಿ ಕ್ರಿಸ್ತನ ಹೊಸ ಬೆಳಕು