ಭಯಪಡಬೇಡ ಕಳವಳ ನನ್ನ ಮನವೇ

ಕನ್ನಡ

ಭಯಪಡಬೇಡ ಕಳವಳ ನನ್ನ ಮನವೇ ಧೈರ್ಯದಿಂದ ಮುಂದೆ ಸಾಗು ಸೇನಾಧೀಶ್ವರನು ಯುದ್ಧಶೂರನು ನಿನ್ನ ಮುಂದೆ ನಡೆಯುವರು 1.ಫರೋಹನ ರಥಬಲದಿಂದ ನೀನಂತು ಹೆದರಬೇಡ ಸೀಸೆರನ ಸೈನ್ಯಗಳಿಂದ ನೀನಂತು ಭಯಪಡಬೇಡ ||2|| ಯುದ್ಧವು ನಿನ್ನದಲ್ಲ ಯೇಹೋವನೇ ಯುದ್ಧಮಾಡುವ 2.ಗೊಲ್ಯಾತನು ಅಡ್ಡಬಂದರೂ ನೀನಂತು ಹೆದರಬೇಡ ಸೌಲನು ಹಿಂದಟ್ಟಿದರೂ ನೀನಂತು ಭಯಪಡಬೇಡ ||2|| ನಿನಗೆದುರಾಗಿ ಕಲ್ಪಿಸಿದ ಯಾವ ಆಯುಧ ಜಯಿಸದು 3.ಹಗಲಲ್ಲಿ ಹಾರಿ ಬರುವ ಬಾಣಕ್ಕೆ ಹೆದರಬೇಡ ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಭಯಪಡಬೇಡ ||2|| ನಿನ್ನ ಕಾಯುವ ದೇವರು ನಿನಗೆ ನೆರಳಾಗಿ ನಿಂತಿಹರು 4.ಭೂತ ಪ್ರೇತ ಕಾಟಗಳಿಂದ ನೀನಂತು ಹೆದರಬೇಡ ಮಾಟಮಂತ್ರ ಸಂಗತಿಗಳಿಂದ ನೀನಂತು ಭಯಪಡಬೇಡ ||2|| ಲೋಕದಲ್ಲಿರುವವನಿಗಿಂತ ನನ್ನ ಯೇಸು ದೊಡ್ಡವರು