ಕನ್ನಡ
ಭೂನಿವಾಸಿಗಳೇ ಯೇಸುವನ್ನು ಸ್ತುತಿಸಿರಿ-೨
ಸಂತೋಷದಿಂದ ಒಂದುಗೂಡಿರಿ
ಸಂಗೀತದಿಂದ ಸ್ತುತಿಹಾಡಿರಿ
ಆತ ಒಳ್ಳೆಯವನು ದಯೆ ಎಂದಿಗಿರ್ವದು
ಆತ ಬಲ್ಲವನು ದಯೆ ಎಂದು ಇರ್ವದು
ಕರ್ತನೊಬ್ಬನೇ ದೇವರೆಂದು ನಂಬಿರಿ
ಆತ ನಮ್ಮ ಸೃಷ್ಟಿಕರ್ತನು
ಆತ ನಮಗಿರ್ವನು ನಾವು ಆತನವರೆ
ಆತನನ್ನು ಕೀರ್ತಿಸಿರಿ
ಕರ್ತನನ್ನೆ ನಂಬಿಗಸ್ತರೆನ್ನಿರಿ
ಆತ ನಮ್ಮ ವಿಮೋಚಕನು
ಆತ ಒಳ್ಳೆ ಕುರುಬ ಆತನ್ ಕುರಿಗಳು ನಾವು
ಆತನನ್ನೆ ಕೀರ್ತಿಸಿರಿ