ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು?,

ಕನ್ನಡ

ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ ಯಾರುಂಟು?, ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ ಬಯಕೆ ಏನುಂಟು? ||ಭೂಪರಲೋಕದಿ|| ನೀನೆ ನನ್ನ ಆಸೆ ಅಯ್ಯ, ನಿನ್ನನ್ನೆ ನಾ ಆತುಕೊಂಡೆ ||ಭೂಪರಲೋಕದಿ|| 1 ನಿನ್ನೊಂದಿಗೆ ಎಂದೆಂದೂ ನಾ ಬಾಳುವೆ (೨), ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ (೨), ||ನೀನೆ ನನ್ನ|| 2 ನಿನ್ ಚಿತ್ತದಂತೆ ನನ್ನನ್ನು ನಡೆಸುವೆ (೨), ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇರಿಸುವೆ (೨), ||ನೀನೆ ನನ್ನ|| 3 ನನ್ನಾತ್ಮದ ಬಲವೇ ನನ್ ಯೇಸಯ್ಯ (೨), ನನ್ನಯ ಬಾಳು ಎಂದೆಂದೂ ನೀನೇ ಅಯ್ಯ (೨), ||ನೀನೆ ನನ್ನ|| 4 ನಿನ್ನಲ್ಲೆ ನಾ ಆಶ್ರಯ ಹೊಂದಿರುವೆ (೨), ನಿನ್ನೊಂದಿಗೆ ಬಾಳ್ವದೆ ನನ್ ಭಾಗ್ಯವು (೨), ||ನೀನೆ ನನ್ನ||