ಮನ ತುಂಬಿ ಹಾಡುವೇ ಯೇಸಯ್ಯ

ಕನ್ನಡ

ಮನ ತುಂಬಿ ಹಾಡುವೇ ಯೇಸಯ್ಯ ಮನಸಾರೆ ಸ್ತುತಿಸುವೇ ನಿನ್ನನ್ನ ಮನ ಮೆಚ್ಚಿದ ನನ್ನ ದೇವರೆ ನಿನ್ನನ್ನೆ ಪ್ರೀತಿಸುವೇ 1.ದರಿದ್ರನನ್ನು ದೂಳಿನಿಂದೆತ್ತಿ ಬಂಡೆಯ ಮೇಲೆ ನಿಲ್ಲಿಸಿರುವೇ ನಿನ್ನ ಮಹಿಮೆ ಕಾಣದೆ ನಾ ಹೋದರು ಪ್ರೀತಿಸಿದೆ ಅಪ್ಪಾ ನನ್ನ ಪ್ರಾಣವ – ಮನ 2.ಘೋರ ಪಾಪಿಗೆ ಕ್ಷಮೆಯ ನೀಡಿ ಉನ್ನತದಲ್ಲಿ ನೆಲೆಸಿರುವೇ ನಿನ್ನ ಪ್ರೀತಿ ಅರಿಯದೆ ನಾ ಹೋದರು ಕರುಣಿಸಿದೆ ಅಪ್ಪಾ ನನ್ನ ಆತ್ಮವ – ಮನ 3.ಯಾರೇ ನನ್ನನ್ನು ನಿಂದಿಸಿದರು ನಿನ್ನ ಮಾರ್ಗದಿ ಆನಂದಿಸುವೇ ನೀನನ್ನ ಆತ್ಮದ ಅಭಿಷೇಕವು ನೀನನ್ನ ಬಾಳಿಗೆ ಬೆಳಕಗಿರುವೇ – ಮನ