ಮನಸ್ಸಿನ ಆಸೆ ಹೃದಯದ ಬಯಕೆ

ಕನ್ನಡ

ಮನಸ್ಸಿನ ಆಸೆ ಹೃದಯದ ಬಯಕೆ ಎಲ್ಲವು ನೀನೇ ಯೇಸಪ್ಪಾ (2) ಜೀವನದ ನೀರಿಕ್ಷೆ ಪ್ರೀತಿ ನಂಬಿಕೆ ಎಲ್ಲವು ನೀನೇ ನನಗಪ್ಪಾ (2) ಎಲ್ಲರು ಬೇಡವೆಂದು ತಳ್ಳಿಬಿಟ್ಟ ಕಲ್ಲುನಾನು (2) ಮೂಲೆಗಲ್ಲಾಗಿ ನಿಲ್ಲಿಸಿದ ದೇವಾ ನೀನು – 2 ನಿನ್ ಪ್ರೀತಿ ಸಾರಿ ಹೇಳುವೆ ನಿನ್ನ ಉಪಕಾರವ ನಾ ಸ್ಮರಿಸುವೆ ಏನೂ ಇಲ್ಲದಂಥ ಬಡವನು ನಾನಾಗಿದ್ದೆ (2) ಹುಡುಕುತಾ ಬಂದೆ ನೀನು ಶ್ರೀಮಂತನಾಗಿಸಿದೆ ಜೊತೆಗಾರ ನೀನಲ್ಲವೆ ನನ್ನ ಬಾಳಿನ ನಾವಿಕ ನೀನೆ ಮರಣದ ಕಣಿವೆಯಲ್ಲಿ ನಾ ನಡೆಯುವಾಗಲೂ ನಿನ್ನ ದೊಣ್ಣೆ ಕೋಲು ನನ್ನನ್ನು ರಕ್ಷಿಸಿತು ಒಳ್ಳೆ ಕುರುಬನು ನೀನಲ್ಲವೆ ನನ್ನ ರಕ್ಷಿಸಿದ ದೇವನು ನೀನೆ (2)