ಕನ್ನಡ
ಮನಸೇ ಮನಸೇ ಚಿಂತೆ ಮಾಡದಿರು
ಮನಸೇ ಮನಸೇ ಚಿಂತೆ ಮಾಡದಿರು
ಮರೆಯದ ಯೇಸು ಒಬ್ಬನು ಇದ್ಧಾನೆ
ಹೃದಯವೇ ಹೃದಯವೇ ಕಳವಳ ಗೋಳದಿರು
ನಿನ್ನ ಹೃದಯದ ಗಾಯವ ಆತ ಕಾಣುತ್ತಾನೆ
ಆತ ಅಖಿಲವ ತಿಳಿದ ದೇವಾ
ಆತ ಎಲ್ಲಾ ಕಾಣುವ ದೇವಾ
ಆತ ಹತ್ತಿರವಿದ್ದರೆ ಅದು ಸಾಕೆನಗೇ
ಯೇಸುವಲ್ಲೇ ಮನ ಶಾಂತಿ
ಯೇಸುವಲ್ಲೇ ಆಶ್ರಯ
ಯೇಸುವಲ್ಲೇ ಸಮಾದಾನ
ಯೇಸುವಲ್ಲೇ ಆಶಿರ್ವಾದವೇ
ಮಾಯೆ ಮಾಯೆ ಈ ಲೋಕ ಮಾಯೆ
ಈ ಭೂಮಿಯಲ್ಲಿ ಇರುವುದೆಲ್ಲ ನಾಶವಾಗುವದು
ನನ್ ಆಸೆ ಆಸೆ ದೇವರ ರಾಜ್ಯದಲ್ಲಿ
ಈ ಲೋಕದ ಅವಷ್ಯಗಳು ತಾನಾಗಿ ಬರುವದು