ಮನುಷ್ಯರ ಪಾಪ ನೀಗಲು ಮಾನವ ರೂಪವ ತಾಳಿದೆ ಯೇಸುವೇ

ಕನ್ನಡ

ಮನುಷ್ಯರ ಪಾಪ ನೀಗಲು ಮಾನವ ರೂಪವ ತಾಳಿದೆ ಯೇಸುವೇ ಈ ವೇದನೆ ನಿನಗೆ ಬರಲು ಕಾರಣ ಪಾಪಿ ನಾನಯ್ಯ ದುಷ್ಟ ಯೋಚನೆ ಮಾಡಿದ ನಾನು ಶಿಕ್ಷೆ ಹೊಂದಲು ಯೋಗ್ಯನು ಶಿಷ್ಟ ರಾಗದಿಂ ತಲೆಗೆ ಮುಳ್ಳಿನ ಕಿರೀಟ ಹಾಕಿದರು ೧೦ ಸಾವಿರ ಜನರ ಈ ದ್ವಜ ಪ್ರಾಯನಾದ ಪ್ರಿಯನೇ ನಿನ್ ಮುಖವು ನೋಡಲಾಗದಷ್ಟು ವಿಕಾರವಾಯಿತು ವದ್ಯ ಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ನಿನಾದೆ ಉಣ್ಣೆ ಕತ್ತರಿಸುವರ ಮುಂದೆ ಮೌನ ಕುರಿಯಾದೆ ನನ್ನ ದ್ರೋಹಗಳಾದೆಸೆಯಿಂದ ನಿನಗೆ ಗಾಯವಾಯಿತು ನಿನ್ನ ಬಾಸುಂಡೆಗಲಿಂದಲೇ ನನ್ನ ರೋಗ ಗುಣವಾಯಿತು ಯಾವ ಅನ್ಯಾಯ ಮಾಡದಿದ್ದರು ಶಿಲುಬೆ ಮೇಲೆ ತೂಗಿದೆ ಪಾಪಿಗಳಲ್ಲಿ ಪಾಪಿಯಾಗಿ ನಿಂದೆ ಸಹಿಸಿದೆ ಮುರಿಯಲ್ಪಟ್ಟ ನಿನ್ ದೇಹವು ಜೀವ ರೊಟ್ಟಿಯಾಗಿ ಮಾರ್ಪಟ್ಟಿತು ಸುರಿಸಲ್ಪಟ್ಟ ನಿನ್ ರಕ್ತವು ಜೀವ ಪಾನವಾಯಿತು