ಕನ್ನಡ
ಮಹಿಮೆ ಮಹಿಮೆ ಸದಾ ಆತನಿಗೆ , ಯೇಸುರಾಜನಿಗೆಂದಿಗಾಗಲಿ
ರಕ್ಷಣಾನಂದವ ನೀಡಿದ ಕರ್ತನ , ಎಂದೆಂದೂಹಾಡಿ ಕೊಂಡಾಡುವೆ
ಆ..ಆನಂದವೇ ಪರಮಾನಂದವೇ ಸ್ವರ್ಗದಾನಂದವೇ ಎಂದಿಗೂ
ಅತಿಘೋರವಾದ ಪಾಪದ ಬಂಧದಿ ನನ್ನನೆಂದಿಗೂ ಬಿಡಿಸಿದನು
ಕುರುಡನಾಗಿದ್ದೆ ಕರುಣೆ ತೋರಿದಿ ಪರಮ ದೃಷ್ಟಿಯ ನೀಡಿದಿ
ಕರುಣಾಸಾಗರ ಪಾಪಿಯ ರಕ್ಷಿಸ ಧರೆಗಿಳಿದು ನೀ ಬಂದವನೇ
ಜೀವಮಾರ್ಗದೊಳು ಹೋಗುವೆ ಹೋಗುವೆ ಯೇಸುರಾಜನ ಹಿಂದೆ ಹೋಗುವೆ
ಭಾಗ್ಯಾಕಾನಾನಿಗೆ ಸೇರುವ ವರೆಗೆ ಸದಾ ಆತನ ಹಿಂದೆ ಹೋಗುವೆ
ಯೇಸು ಬರುವಾಗ ನನ್ನ ಸೇರಿಸುವ ಸ್ವರ್ಗ ರಾಜ್ಯದ ಮಹಿಮೆಯೊಳು
ಆ ಸಮೂಹದಲಿ ಅಂದು ಕರ್ತನೊಡನೆ ಹಾಡಿ ಹಾಡಿ ಸಂತೋಷಿಸುವೆ