ಕನ್ನಡ
ಮಹಿಮನೇಸು ಬರುವನು ನಲಿದು ಹಾಡು ನೀ ,
ಮದಲಿಂಗನು ಬರುವನು ಸಿದ್ಧನಾಗು ನೀ,
ಹಲ್ಲೆಲೂಯಾ ಆನಂದವೇ,
ಹಾಡಿ ಪಾಡಿ ನಾಟ್ಯವಾಡಿ ಆನಂದಿಸು ನೀ,
ನಂಬಿಗಸ್ತನು ಆತ ಸತ್ಯವಂತನು ,
ನೀತಿವಂತನೂ ರಾಜಾಧಿರಾಜನು ,
ಸರ್ವ ಶ್ರೇಷ್ಠನು ಮಹಿಮಪ್ರಭಾವನು ,
ನಲುಮೆಯುಳ್ಳವ ಮಹಾ ಮಹಿಮೆಯುಳ್ಳವ ,
ಚಿನ್ನದ ಬೀದಿ ಅದು ಹೊಳೆಯುವ ಹಾದಿ ,
ವಜ್ರ-ವೈಡೂರ್ಯ ಅಲ್ಲಿ ಮಿನುಗುತಿರುವುದು ,
ರತ್ನ-ರಾಶಿಯು ನೀಲ ಸ್ಪಟಿಕವು ,
ಪದ್ಮರಾಗ ಪುಷ್ಪರಾಗ ಸ್ತುತಿಸಿ ಹಾಡ್ವೆವು ,
ಬಿಳಿ ಕುದುರೆಯ ಮೇಲೆ ಕೂತು ಬರುವನು ,
ನೀತಿಯಿಂದಲೆ ಆತ ಯುದ್ದ ಮಾಡ್ವನು ,
ಹಲ್ಲೆಲುಯಾ ಎಂಬ ಧ್ವನಿಯು ಕೇಳ್ವದು ,
ತಾರೆಗಳು ಕೈತಟ್ಟಿ ಸ್ತೋತ್ರ ಮಾಡುವವು