ಮೃತ್ಯುಂಜಯನೇ ಮೃತ್ಯುಂಜಯನೇ; ನನ್ನೇಸು ರಾಜನೇ

ಕನ್ನಡ

ಮೃತ್ಯುಂಜಯನೇ ಮೃತ್ಯುಂಜಯನೇ; ನನ್ನೇಸು ರಾಜನೇ ಇಗೋ ಸತ್ತವನಾಗಿ, ಮರಣವ ಗೆದ್ದು, ಎದ್ದು ಬಂದವನೇ ||2|| ನನ್ನೇಸು ರಾಜನೇ ನನ್ನೇಸು ರಾಜನೇ ಮೃತ್ಯುಂಜಯನೇ ಮೃತ್ಯುಂಜಯನೇ ||2|| ಪರಿಶುದ್ಧನೆಂಬುದು ನಿನ್ನ ನಾಮ ಪರಿಶುದ್ಧನೆನ್ನಲು, ನೀ ಮಾತ್ರ ಯೋಗ್ಯ ಪರಿಶುದ್ಧ ಪರಿಶುದ್ಧ ನೀನೇ, ನನ್ನೇಸು ರಾಜನೇ ||2|| ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2|| ನನ್ನೇಸು ರಾಜನೇ ನನ್ನೇಸು ರಾಜನೇ ಮೃತ್ಯುಂಜಯನೇ ಮೃತ್ಯುಂಜಯನೇ ||2|| ನನ್ನ ಪಾಪವ ಅಳಿಸಲು, ನರನಾಗಿ ನೀ ಬಂದೆ ನಾ ಅದನ್ನು, ಅರಿಯದೆ ಹೋದೆನು ||2|| ನೀನಾದರೂ ನನ್ನನ್ನು ಬಿಟ್ಟುಕೊಡದೇ ನಿನ್ನ ರಕ್ತವ ಕೊಟ್ಟು ಬಿಡಿಸಿರುವೆ ನನ್ನಾತ್ಮಕ್ಕೆ ನಿನ್ನ ಜೀವಕೊಟ್ಟು, ಮರುಜನ್ಮವ ನೀಡಿದೆ ||2|| ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2|| ನನ್ನೇಸು ರಾಜನೇ ನನ್ನೇಸು ರಾಜನೇ ಮೃತ್ಯುಂಜಯನೇ ಮೃತ್ಯುಂಜಯನೇ ||2|| ಮರಣವು ನಿನ್ನನ್ನು ಸೋಲಿಸಲು ಆಗಲಿಲ್ಲ ಬದಲಿಗೆ ಮರಣವ ನೀನೇ ಜಯಿಸಿರುವೆ ||2|| ಆ ಜಯವನ್ನು ನನಗಾಗಿ ನೀಡಿರುವೆ ನಿನ್ನ ಜಯದಲ್ಲೇ ಎಂದೆಂದೂ ಜೀವಿಸುವೆ ನೀ ಕೊಟ್ಟ ಜಯವನು ಮರೆಯದೇ, ನೆನೆದು ನೆನೆದು ಹಾಡುವೆ ||2|| ಇಗೋ ಸತ್ತವನಾದೆ ನೀ, ಯುಗಯುಗಕ್ಕೂ ಜೀವಿಸಿ ನನ್ನಲ್ಲಿ ನೆಲೆಸಲು, ನೀ ಮರಣವ ಗೆದ್ದು ಬಂದೆ ||2|| ನನ್ನೇಸು ರಾಜನೇ ನನ್ನೇಸು ರಾಜನೇ ಮೃತ್ಯುಂಜಯನೇ ಮೃತ್ಯುಂಜಯನೇ ||2||