ಮೊದಲನೆ ಸ್ಥಾನ ನನ್ನೇಸುವಿಗೆ

ಕನ್ನಡ

ಮೊದಲನೆ ಸ್ಥಾನ ನನ್ನೇಸುವಿಗೆ ನನ್ನ ಹೃದಯದಲ್ಲಿ ನಿಮಗೆ ಯೇಸು ಮೊದಲನೆ ಸ್ಥಾನ ನಾ ನೀಡುವೇನು ಯೇಸು ನಿನ್ನ ಸೇವೆಯಲ್ಲಿಯು ಮೊದಲನೆ ಸ್ಥಾನ ನಾ ನೀಡುವೇನು ನನ್ನ ಎಲ್ಲ ಕೆಲಸ ಕಾರ್ಯದಲ್ಲಿಯು||2|| ಈ ಜೀವನದ ಅಧಿಪತಿ ನೀನೇ ಈ ಹೃದಯದ ನಾಯಕ ನೀನೇ||2|| 1.ನನ್ನ ಬೆಳೆಯ ಪ್ರಥಮ ಫಲದಿಂದ ಸನ್ಮಾನಿಸುವೆ ಚಿಯೋನಿನ ದೇವರೆ ಆಶೀರ್ವದಿಸು||2|| ನಷ್ಟವಾಗಿ ಹೋದರು ತಡವಾಗಿ ಬಂದರು ಕ್ರಿಸ್ತನಲ್ಲಿ ನಂಬಿಕೆ ಇಡುವೆ||2|| 2.ನಾನೂ ನನ್ನ ಮನೆಯವರು ನಿನ್ನ ಸೇವಿಸುವೆವು ಯೆಹೋಶುವನ ದೇವರೆ ಆಶೀರ್ವದಿಸು||2|| ಸ್ತುತಿ ಸ್ತೋತ್ರ ಯಜ್ಞವ ನಿನಗೆ ಸಮರ್ಪಿಸುತ್ತ ನಿತ್ಯವು ಆರಾಧಿಸುವೆ||2|| 3.ನನ್ನ ಆಹಾರವು ನೀರಿನ ಮೇಲೆ ಚಲ್ಲುವೆ ಅನುಗ್ರಹದಿಂದ ನನಗೆ ಪ್ರಾಪ್ತವಾಗಲಿ||2|| ಪರಲೋಕ ದ್ವಾರವ ಈಗ ತೆರೆಯಲ್ಪಡಲಿ ಸುವರವ ಸುರಿಯ ಮಾಡು||2||