ಯಜಮಾನನೆ, ನನ್ ಯೇಸು ರಾಜನೆ (೨),

ಕನ್ನಡ

ಯಜಮಾನನೆ, ನನ್ ಯೇಸು ರಾಜನೆ (೨), ಆಸೆಯೆಲ್ಲಾ ಆಕಾಂಕ್ಷೆಯೆಲ್ಲಾ, ನಿನ್ ಚಿತ್ತ ಮಾಡುವುದೊಂದೆ (೨) ||ಯಜಮಾನನೆ|| ನಿನಗಾಗಿಯೆ ಬಾಳುವೆ, ನಿನ್ನ್ನನ್ನೆ ಪ್ರೀತಿಸುವೆ (೨), ಬಲಿಯಾಗಿ ರಕ್ಷಿಸಿದೆ, ನೀ ಬಲಿಯಾಗಿ ರಕ್ಷಿಸಿದೆ, ಪರಲೋಕ ತೆರೆದಿರುವೆ (೨) ||ಯಜಮಾನನೆ|| ನನ್ ಜೀವಮಾನವೆಲ್ಲಾ ದುಡಿಯುವೆ ನಿನಗಾಗಿಯೆ (೨), ಕರೆದಿರುವೆ ನಿನ್ನ ಸೇವೆಗೆ, ನನ್ನ ಕರೆದಿರುವೆ ನಿನ್ನ ಸೇವೆಗೆ, ಅದನ್ನು ನಾ ಮರೆಯುವೆನೆ (೨) ||ಯಜಮಾನನೆ|| ಅಪ್ಪ ನಿನ್ ಸನ್ನಿಧಿಯಲ್ಲೆ, ಹರ್ಷಿಸಿ ನಲಿಯುವೆನು (೨), ನಿನ್ನನು ಕಾಣಲೆಂದೆ, ನಾ ನಿನ್ನನು ಕಾಣಲೆಂದೆ, ಹೃದಯವು ತವಕಿಸಿದೆ (೨) ||ಯಜಮಾನನೆ||