ಯಜಮಾನನೇ ನನ್ನೇಸು ರಾಜನೆ

ಕನ್ನಡ

ಯಜಮಾನನೇ ನನ್ನೇಸು ರಾಜನೆ ಆಸೆಯಲ್ಲಾ ಆಕಾಂಕ್ಷೆಯಲ್ಲಾ ನಿನ್ ಚಿತ್ತ ಮಾಡುವುದೊಂದೇ ಯಜಮಾನನೇ ಯಜಮಾನನೇ ನನ್ನೇಸು ರಾಜನೇ 1.ನಿನಗಾಗಿಯೇ ಬಾಳುವೆ ನಿನ್ನನ್ನೇ ಪ್ರೀತಿಸುವೆ ಬಲಿಯಾಗಿ ರಕ್ಷಿಸಿದೆ-ನೀ ಪರಲೋಕ ತೆರೆದಿರುವೆ 2.ನನ್ ಜೀವ ಮಾನವೆಲ್ಲಾ ದುಡಿಯುವೆ ನಿನಗಾಗಿಯೇ ಕರೆದಿರುವೆ ನಿನ್ನ ಸೇವೆಗೆ-ಅದನ್ನು ನಾ ಮರೆಯುವೆನೇ 3.ಅಪ್ಪಾ ನಿನ್ ಸನ್ನಿಧಿಯಲ್ಲೇ-ಹರ್ಷಿಸಿ ನಲಿಯುವೆನು ನಿನ್ನನ್ನು ಕಾಣಲೆಂದೆ – ಹೃದಯವು ತವಕಿಸಿದೆ 4.ದೇಶದ ಆಡಳಿತ ಕರ್ತನೆ ನಿನ್ನದಾಗಲಿ – ನನ್ ಬಡತನವ ನೀಗಿಸಯ್ಯಾ –ಕಷ್ಟವ ತೀರಿಸಯ್ಯಾ