ಯೆಸಯ್ಯಾ ನಿನ್ನ ಸ್ತುತಿಸುವೆನು

ಕನ್ನಡ

ಯೆಸಯ್ಯಾ ನಿನ್ನ ಸ್ತುತಿಸುವೆನು ನಾನು ಬದುಕಿರುವ ಕಾಲವೆಲ್ಲ ಸ್ತುತಿಸುವೆನು ನಾನು ಸ್ತುತಿಸುವೆನು ಬದುಕಿರುವ ಕಾಲವೆಲ್ಲ 1.ಎಲ್ಲರಿಗೂ ನಾ ಬೇಡವಾದೆ ನೀನೇ ಬೇಕೆಂದು ನನ್ನ ಆರಿಸಿಕೊಂಡೇ ಅಪ್ಪಾ ನಿನ್ನ ಪ್ರೀತಿಯನ್ನು ಹಾಡಿ ಹೊಗಳುವೆ ಒಳೆಯವನು ಎಂದು ಸಾರಿ ಹೇಳುವೆ – ಯೆಸಯ್ಯಾ 2.ಹೊಲಸಾದ ಕೆಸರಲ್ಲಿದ್ದ ನನ್ನನ್ನು ನೀ ಹುದುಕಿಬಂದೆ ಯೇಸು ನಿನ್ನ ರಕ್ತದಿಂದ ನನ್ನ ತೊಳೆದು ನೀತಿವಂತನೆಂದು ಹೆಸರು ಕೊಟ್ಟೆ – ಯೆಸಯ್ಯಾ 3.ಬರುಡಾದ ಜೀವಿತವನ್ನು ಹಸುರಾಗಿ ಮಾರ್ಪಡಿಸಿದೆ ಕರ್ತನೆ ನನ್ನ ಒಳ್ಳೆ ಕುರುಬನು ಎಂದೆಂದಿಗೂ ನಾ ಕೊರತೆಪಡೆನು – ಯೆಸಯ್ಯಾ