ಯೆಹೋವನ ಧರ್ಮಶಾಸ್ತ್ರ ಅನುಸರಿಸುವವರು

ಕನ್ನಡ

ಯೆಹೋವನ ಧರ್ಮಶಾಸ್ತ್ರ ಅನುಸರಿಸುವವರು ಧನ್ಯರು ಧನ್ಯರು||2|| ಕರ್ತನ ಕಟ್ಟಳೆ ಕೈಗೊಂಡು ಬಾಳುವವರು ಭಾಗ್ಯವಂತರು ಸೌಭಾಗ್ಯವಂತರು||2|| 1.ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ||2|| ವೇದ ವಚನದಲ್ಲಿ ಆನಂದ ಪಡುವವರು ಧನ್ಯರು ಧನ್ಯರು ಸದಾಚಾರಿಗಳಾಗಿ ನಡೆಯುವವರು ಧನ್ಯರು ಧನ್ಯರು||2|| 2.ಧರ್ಮನಿಂದಕರ ಜೊತೆ ಕುತುಕೊಳ್ಳದೆ ಸಮಯವನ್ನು ಸುಮ್ಮನೆ ಕಳೆದುಕೊಳ್ಳದೆ||2|| ವೇದ ವಚನವನ್ನು ಧ್ಯಾನಿಸುವವರು ಧನ್ಯರು ಧನ್ಯರು ಹಗಲಿರು ಳು ಅದನ್ನೆ ಧ್ಯಾನಿಸುವವರು ಧನ್ಯರು ಧನ್ಯರು||2|| 3.ಕ್ರಿಸ್ತ ನಂಬಿಕೆ ಇಲ್ಲದವರೊಂದಿಗೆ ಅಶುದ್ಧ ಕಾರ್ಯಕ್ಕೆ ಪಾಲುಗಾರರಾಗದೆ||2|| ದೇವರ ಪ್ರಜೆಯಾಗಿರುವವರು ಧನ್ಯರು ಧನ್ಯರು ದೇವರ ಆಲಯ ಆಗಿರುವ ನಾವು ಧನ್ಯರು ಧನ್ಯರು||2||