ಯುಧಾದ ರಾಜಸಿಂಹ ನೀನೆ

ಕನ್ನಡ

ಯುಧಾದ ರಾಜಸಿಂಹ ನೀನೆ ಅಲ್ಫಾವು ಒಮೇಘಾವು ನೀನೆ ಸ್ತುತಿಗೂ ಮಹಿಮೆಗೆಲ್ಲಾ ಪಾತ್ರನಾದ ಕರ್ತನು ನೀನೆ ನನ್ನ ಒಳ್ಳೆ ದೇವನೆ || ಪಾಪವಾದೆ ನೀ ನನ್ನ ನೀತಿ ಮಾಡಲು ಶಾಪವಾದೆ ನೀ ನನ್ನ ಶಾಪ ನೀಗಲು ಗಾಯವಾದೆ ನೀ ನನ್ನ ರೋಗ ನೀಗಲು ಬಡವನಾದೆ ನೀ ನನ್ನ ದರಿದ್ರ ನೀಗಲು || || ನೀನೆಂದೂ ನನ್ನ ಒಳ್ಳೆ ಕುರುಬ ನನಗೆಂದೂ ಯಾವ ಕೊರತೆ ಇಲ್ಲ ಹಸಿರುಗಾವಲಲ್ಲಿ ಕಾಲುವೆಗಳ ಬಳಿ ನನ್ನ ನಡೆಸೋ ಒಳ್ಳೆ ದೇವನೆ || || ವೈರಿಯ ಮುಂದೆ ಔತಣ ಸಿದ್ಧ ಮಾಡಿ ತಲೆಯ ಎಣ್ಣೆಯಿಂದ ಅಭಿಷೇಕ ಮಾಡಿಸಿ ಜೀವಮಾನವೆಲ್ಲಾ ಶುಭವು ಕೃಪೆಯು ಇರುವುದು ಕರ್ತನ ಮನೆಯಲ್ಲಿ ಎಂದೆಂದೂ ವಾಸಿಸುವೆ || || ನನ್ ಬಾಯಿ ನಿನ್ನ ನೀತಿಯನ್ನು ದಿನವೆಲ್ಲ ನಿನ್ನ ಸ್ತುತಿಯನ್ನು ಎಂದೆಂದೂ ಹಾಡಿ ಸ್ತುತಿಸಿ ಕೊರತೆಯೆಲ್ಲ ನೀಗಿಸುವ ಕರ್ತನಿಗೆ ಸಲ್ಲಿಸುವೆನು || ||ನಿನ್ನ ಪ್ರಭಾವದ ಐಶ್ವರ್ಯದಿಂದಲೆ ನನ್ನೆಲ್ಲ ಕೊರತೆಯ ನೀಗಿಸುವ ದೇವನೆ ಯೆಹೋವ ಯೀರೆ ನೀ ನನ್ನ ಎಲ್ ಷಡಾಯ್ ಕೊರತೆ ನೀಗುವ ಐಶ್ವರ್ಯದಾಯಕನೆ ||