ಯೇಸಪ್ಪ ನಿನ್ನ ನಾಮದಲ್ಲಿ

ಕನ್ನಡ

ಯೇಸಪ್ಪ ನಿನ್ನ ನಾಮದಲ್ಲಿ ಅದ್ಬುತವು ಇನ್ನೂ ನಡೆಯುತ್ತೆ ದೆವ್ವ ಓಡುತ್ತೆ, ರೋಗ ನೀಗುತ್ತೆ –-2 ಪಾಪ ಪರಿಹಾರವಾಗುತ್ತೆ… ನಿಮ್ಮ ಬಲವು ಕುಂದಿ ಹೋಗಲಿಲ್ಲ ಪುನರುತ್ಥಾನ ಶಕ್ತಿ ಬದಲಾಗಲಿಲ್ಲ ಯೇಸಪ್ಪ 1.ಕಷ್ಟ ಸಂಕಟವೋ ವ್ಯಾದಿ ಭಾದೆಯೋ ಇಂದು ನನ್ನೇಸು ಬಿಡುಗಡೆ ಕೊಡುವನು –-2 ನಂಬಿಕೆ ನಮ್ಮಲ್ಲಿ ಇದ್ದರೆ ಸಾಕು ದೇವರ ಮಹಿಮೆಯ ಕಾಣುವೆವು –-2 2.ಮಾಟಮಂತ್ರವೂ ದೆವ್ವ ಕಾಟವೋ ಈಗಲೆ ನನ್ನೇಸು ಮುರಿದು ಹಾಕುವ–-2 ಪರಿಶುದ್ದಾತ್ಮನು ನಮ್ಮೊಳಗೆ ಇರಲು ಲೋಕವನ್ನೆ ಜೈಸುವೆ ನಾ –-2 3.ಸೈತಾನ ಶಕ್ತಿಯೋ ಪಾಪದ ಜೀವಿತವೋ ಈಗಲೇ ನನ್ನೇಸು ಒಡೆದು ಹಾಕುವ-2 ಸ್ತುತಿಯ ಆಯುದವು ನಮ್ಮಲ್ಲಿ ಇದ್ದರೆ ಅಶುದ್ಧಆತ್ಮವು ಓಡಿ ಹೋಗ್ವದು