ಯೇಸಯ್ಯ ನೀನು ಎಷ್ಟೋ ಸುಂದರನು

ಕನ್ನಡ

ಯೇಸಯ್ಯ ನೀನು ಎಷ್ಟೋ ಸುಂದರನು ಮನ ಮರುಗೋ ದೇವರು ನೀನೆ ಸಂತೈಸಿ ಕಾಯುವೆ ನೀನೆ ||2|| 1.ಸಾಕು ಸಾಕಾಗಿ ಹೋಗಿತ್ತು ಈ ಜೀವನ ಬದುಕುವ ಆಸೆಯು ಮತ್ತೊಮ್ಮೆ ನೀ ನೀಡಿದೆ ||2|| ನನ್ನ ಸ್ನೇಹಿತ ನೀನೆ ನನ್ನ ಆಶ್ರಯ ನೀನೆ ||2|| 2.ಒಂದೇ ಒಂದು ಕ್ಷಣವು ನನ್ನ ಮರೆಯಲಿಲ್ಲ ನಿನ್ನ ಎದೆಯಲ್ಲಿ ಒರಗಿಸಿ ಕಾಪಾಡಿರುವೆ ||2|| ನನ್ನ ಸಂತೈಸಿದೆ ನನ್ನ ಪ್ರೀತಿಸಿದೆ ||2|| 3.ನಾನೂ ಯಾರಿಗೂ ಬೇಡವಾದ ಕಲ್ಲಾಗಿರಲು ಮುಲೆಗಲ್ಲಾಗಿ ನಿಲ್ಲಿಸಿದೆ ನನ್ನ ಯೇಸಯ್ಯ ||2|| ನನ್ನ ಹುಡುಕಿ ಬಂದು ನನ್ನ ಆರಿಸಿಕೊಂಡೆ ||2||