ಯೇಸಯ್ಯಾ ಯೇಸಯ್ಯಾ ನೀ ನನ್ನ ಕುರುಬ

ಕನ್ನಡ

ಯೇಸಯ್ಯಾ ಯೇಸಯ್ಯಾ ನೀ ನನ್ನ ಕುರುಬ ನಾ ನಿನ್ನ ಕುರಿಮರಿಯೂ ದೇವಾ ನಾ ನಿನ್ನ ಮುದ್ದುಮರಿಯೂ ಯೇಸಯ್ಯಾ ಯೇಸಯ್ಯಾ ನೀ ಒಳ್ಳೆ ತಾಯಿ ನಾ ನಿನ್ನ ಮುದ್ದುಮಗನೂ ಡ್ಯಾಡಿ ಮಡಿಲಲ್ಲಿ ಮಲಗುವೆನು ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ತಪ್ಪಿ ಹೋದ ಕುರಿಯು ನಾನು ಹುಡುಕಿ ಬಂದ ಕುರುಬನು ನೀನು (2) ಸಿಕ್ಕಿದೆ ನಿನ್ನ ಕೈಯ್ಯಲಿ ನಾನು ಸೇರಿದೆ ನಿನ್ನ ಮಂದೆಗೆ (2) ಯೇಸಯ್ಯಾ ನಿನ್ನಂತ ಕುರುಬನ ನಾನೆಲ್ಲು ಕಾಣೆನು ನಿನ್ನೊಂದಿಗಿರುವಾಗ ನಾ ಕೊರತೆ ಪಡೆನು (2) ಹಸಿರಾದ ಗಾವಲಿನಲ್ಲಿ ಎಂದೂ ನನ್ನನ್ನು ತಂಗಿಸುವಾ (2) ಯೇಸಯ್ಯಾ ನಿನ್ನ ಕೃಪೆಯನ್ನು ನಾ ಸ್ಮರಿಸಿ ಬಾಳುವೆನು ನಿನ್ನ ಪ್ರೀತಿಯಿಂದ ನಾ ದೂರ ಹೋಗೆನು (2) ನಿನ್ನ ಮಂದೆಯಲ್ಲಿ ನಾನು ಸುರಕ್ಷಿತನಾಗಿರುವೆನು (2) ಯೇಸಯ್ಯಾ