ಯೇಸು ಎಂದು ನಾ ಹೇಳಲು ಸಂತೋಷ ಸಂತೊಷವೇ,

ಕನ್ನಡ

ಯೇಸು ಎಂದು ನಾ ಹೇಳಲು ಸಂತೋಷ ಸಂತೊಷವೇ, ಅಪ್ಪ ಎಂದು ನಾ ಕೂಗಲು ಒಳಗೆಲ್ಲ ಆನಂದವೆ. ನೀನೆ ನನ್ನ ರಾಜನು ನೀನೆ ನನ್ನ ಶರಣನು (2) ನೀನೆ ನನ್ನ ಬಂಡೆಯು ನೀನೆ ನನ್ನ ಕೋಟೆಯು. ನೀ ನನ್ನ ಆಶ್ರಯವೆ. ಯಾಯಿ…….. ಯೇಸು ಎಂದು ಯೂದಕುಲದ ಸಿಂಹವೆ ಯೆಹೂದ್ಯರ ರಾಜನೆ (2) ಹಗಲು ರಾತ್ರಿ ತೂಕಡಿಸದೆ ಎಂದೆಂದಿಗೂ ನಿದ್ರಿಸದೆ ನನ್ನನ್ನು ಕಾಯುವಾತನೆ. ಯಾಯಿ….. ಯೇಸು ಎಂದು ಸಂತೋಷಕ್ಕೆ ಕೊನೆಯೆ ಇಲ್ಲ ಉಲ್ಲಾಸಕ್ಕೆ ಮಿತಿಯೆ ಇಲ್ಲ (2) ದುಃಖವೆಂಬುದು ನನ್ನಲ್ಲಿಲ್ಲ ಚಿಂತೆ ಎಂಬುದು ಇಲ್ಲವೆ ಇಲ್ಲ ನೀ ನನ್ನ ಜೊತೆ ಇರಲು. ಯಾಯಿ…. ಯೇಸು ಎಂದು