ಕನ್ನಡ
ಯೇಸು ಕೋಟೆಯಲ್ಲಿ ನಾ ನುಸುಲಿದೆನು ಇನ್ನು ಏನೂ ಸಂಭವಿಸದು ಯಾವಕೇಡು ಸಮೀಪಿಸದು-೨
ಯೇಸುವಿನ ರಕ್ತ ನನ್ನಮೇಲೆ ಸೈತಾನನಿಗೆ ಸೋಲು-೨ ಪ್ರೇಮದಿ ಶಿಲುಬೆಯ ಬಲಿಯಾಗಿ ಪಾಪವ ಜಯಿಸಿದನು-೨
ಈವರೆಗೂ ಕಾಯ್ದ ನನ್ನೇಸುವು ಎಂದೆಂದೂ ಕಾಯುವನು-೨ ಲೋಕದಲ್ಲಿ ಇರುವವನಿಗಿಂತಲೂ ನನ್ನೇಸು ದೊಡ್ಡವನು-೨
ಯೇಸುವೆ ಬೆಳಕು ರಕ್ಷಕನು ಯಾರಿಗೂ ಅಂಜೆನು-೨ ಆತನೆ ಬಾಳಿನ ಬಲವಾದ ಯಾರಿಗೂ ಭಯಪಡೆನು-೨
ತಾಯಿ ತನ್ ಮಗುವನ್ನು ಮರೆತಾರೂ ಮರೆಯಾನು ನನ್ನೇಸುವು-೨ ಆರೋನನ್ ಹಾಗೆ ಅಭಿಷೇಕಿಸಿ ನನ್ನನ್ನು ನಡೆಸುವನು-೨
ಬೆಟ್ಟ ಗುಡ್ಡಗಳೂ ಕದಲಿದರು ಮಾರ್ಪಡದು ನಿನ್ನ ಕೃಪೆಯು-೨ ಅನಾದಿ ಸ್ನೇಹದಿ ಪ್ರೀತಿಸಿ ನನ್ನನ್ನು ಸೆಳೆದುಕೊಂಡಿ-೨