ಯೇಸು ನನ್ನಲ್ಲಿ ನೀನಿರಲು, ಮನ ಸೋತು ನಾ ಹೋಗಲಾರೆ (೨),

ಕನ್ನಡ

ಯೇಸು ನನ್ನಲ್ಲಿ ನೀನಿರಲು, ಮನ ಸೋತು ನಾ ಹೋಗಲಾರೆ (೨), ನೀನು ಎಲ್ಲವ ನೋಡಿಕೊಳ್ಳುವೆ (೪), ||ಯೇಸು ನನ್ನಲ್ಲಿ|| ಸಮಾಧಾನ ಕರ್ತನು ನೀನಲ್ಲವೆ? ಸರ್ವ ಶಕ್ತನು ನೀನಲ್ಲವೆ? (೨) ||ಯೇಸು ನನ್ನಲ್ಲಿ|| ಅತಿಶಯ ದೇವನು ನೀನಲ್ಲವೆ? ಆಲೋಚನ ಕರ್ತನು ನೀನಲ್ಲವೆ (೨) ||ಯೇಸು ನನ್ನಲ್ಲಿ|| ತಾಯಿ ತಂದೆಯು ನೀನಲ್ಲವೆ? ಕಾಯುವ ಕರ್ತನು ನೀನಲ್ಲವೆ (೨) ||ಯೇಸು ನನ್ನಲ್ಲಿ|| ಅಂದ ಚಂದವೆಲ್ಲ ನೀನಲ್ಲವೆ? ನನ್ನ ಆಸೆಯೆಲ್ಲ ನೀನಲ್ಲವೆ (೨) ||ಯೇಸು ನನ್ನಲ್ಲಿ|| ನನಗೆ ಸರ್ವವು ನೀನಲ್ಲವೆ? ನನ್ನಲ್ಲಿ ಇರುವಾತ ನೀನಲ್ಲವೆ (೨) ||ಯೇಸು ನನ್ನಲ್ಲಿ|