ಯೇಸು ಬರುವನು ಬೇಗನೆ ಬರುವನು ಸಭೆಯೇ ಎಚ್ಚರ

ಕನ್ನಡ

ಯೇಸು ಬರುವನು ಬೇಗನೆ ಬರುವನು ಸಭೆಯೇ ಎಚ್ಚರ ತಿರುಗಿ ಬರುವುದು ತಡವಿದೆ ಎಂದು ಮೋಸ ಹೋಗಬೇಡ || || ಆ ದಿನವೂ ಯೇಸು ಬರುವ ಘಳಿಗೆಯು || ತಿಳಿಯದೆ ಇರುವುದರಿಂದ ಸಭೆಯೇ ಎಚ್ಚರವಾಗಿರು || 1.ನೋಹನ ಕಾಲದಲ್ಲಿ ಜನರು ದೇವರನ್ನು ಮರೆತು || ಜಲ ಪ್ರಳಯವೂ ಬರುವುದಿಲ್ಲವೆಂದು ನಾಶವಾಗಿ ಹೋದರೂ || || ಆ ದಿನವೂ || ಯೇಸು ಬರುವನು || 2.ಬೆಟ್ಟದಿಂದ ಇಳಿದು ಮೋಶೆ ತಡಮಾಡಿ ಬರಲು ದೇವರನ್ನು ಮರೆತು ಜನರು ನಾಶವಾಗಿ ಹೋದರು || || ಆ ದಿನವೂ || ಯೇಸು ಬರುವನು || 3.ಹತ್ತು ಮಂದಿ ಕನ್ಯೆಯರು ಮದಲಿಂಗ ತಡಮಾಡಿ ಬರಲು || ಐದು ಮಂದಿ ಕನ್ಯೆಯರು ದೇವರ ರಾಜ್ಯ ಕಳೆದುಕೊಂಡರು || || ಆ ದಿನವೂ || ಯೇಸು ಬರುವನು || 4.ಅಂತ್ಯ ಕಾಲದಲ್ಲಿ ಕಠಿಣ ಕಾಲವು ಬರುವುದು || ಭಕ್ತಿಯ ವೇಷ ಹಾಕಿ ಅದರ ಬಲ ಬೇಡ ಹೇಳ್ವರು || || ಆ ದಿನವೂ || ಯೇಸು ಬರುವನು ||