ಯೇಸು ಯೇಸು ಎಂದರೆ

ಕನ್ನಡ

ಯೇಸು ಯೇಸು ಎಂದರೆ ನನ್ನ ಹೃದಯದಲ್ಲಿ ಆನಂದ ವಾಗುವುದು ಸಂತೋಷ ಉಕ್ಕುವುದು ||2|| ಇಮ್ಮಾನುವೇಲ ನನ್ನ ಜೊತೆ ಇರುವಾಗ ಹೇ. ಹೇ. ಹಲ್ಲೆಲೂಯ….. ಹಲ್ಲೆಲೂಯ…. ||2|| ಚಿಂತೆ ದುಃಖ ರೋಗವೆಲ್ಲ ಮಾಯವಾಗುವುದು ಮರೆಯಾಗಿ ಹೋಗುವುದು||2|| 1.ನನ್ನ ತಾಯಿಯ ಗರ್ಭದಲ್ಲಿ ಪಿಂಡವಾಗಿರಲು ಯೇಸು ನಿನ್ನ ಕಣ್ಣು ನನ್ನ ಪ್ರೀತಿಸಿದವು ||2|| ಹುಟ್ಟಿದ ದಿನದಿಂದ ನನ್ನ ಉದ್ದಾರಕ ನೀನೆ ನಾ ಹಿಗ್ಗುತ್ತಿರುವುದು ನಿನ್ನಲ್ಲಿಯೇ ||2|| ಆರಾಧನೆ….. ಆರಾಧನೆ ಕರ್ತನಿಗೆ ನನ್ನ ಜೀವನದ ಅಧಿಪತಿಗೆ ||2|| 2.ಕಾರ್ಗತ್ತಲೆಯಿಂದ ನನ್ನ ಏಳೆದು ಅತಿಶಯವಾದ ಬೆಳಕಿನಲ್ಲಿ ನಡೆಸಿದಿ ||2|| ಪರಲೋಕದ ರೊಟ್ಟಿ ನೀನೆ ಮುಗಿಯದ ಒರತೆ ನೀನೇ ಈ ಲೋಕದ ಬೆಳಕು ನೀನೇ (ಆರಾಧನೆ) ||2|| 3.ನನ್ನ ಜೊತೆಗಾರರಿಗಿಂತ ಉನ್ನತದಲ್ಲಿ ಅಭಿಷೇಕಿಸಿ ನನ್ನ ನಿಲ್ಲಿಸಿರುವೆ ಆದಿಯಲ್ಲಿ ವಾಕ್ಯವಿತ್ತು ಆ ವಾಕ್ಯದ ದೇವರು ನೀನೇ ಈ ವಾಕ್ಯ ನನಗೆ ಜೀವವಾಯಿತು ||2||