ಯೇಸು ಯೇಸು ನನ್ನ ತಂದೆಯಪ್ಪ,

ಕನ್ನಡ

ಯೇಸು ಯೇಸು ನನ್ನ ತಂದೆಯಪ್ಪ, ಅವರೇ ನನಗೆ ಎಂದೂ ಸಕಲವಪ್ಪ… //2// ನನಗಾಗಿಯೇ ಜೀವ ಕೊಟ್ಟಾನಪ್ಪ, ಹೆತ್ತವರು ಮರೆತರೂ, ನನ್ನ ಮರೆಯನಪ್ಪ… //2// ಅಪ್ಪ ಅಪ್ಪ ಯೇಸು ತಂದೆಯಪ್ಪ, ಭಾರತದ ರಕ್ಷಕ ಈ ಯೇಸಪ್ಪ. ಅಪ್ಪ ಅಪ್ಪ ಯೇಸು ತಂದೆಯಪ್ಪ, ಕರುನಾಡ ಪ್ರೀತಿಯ ಯೇಸಪ್ಪ… ಯೇಸು ಯೇಸು ನನ್ನ ತಂದೆಯಪ್ಪ, ಅವರೇ ನನಗೆ ಎಂದೂ ಸಕಲವಪ್ಪ… //2// ಅನುಭವಿಸಿದ ಸಂಕಷ್ಟವ ನಮಗಾಗಪ್ಪ, ಗಾಯವಾದನೂ ನಮ್ಮ ದೆಸೆಯಿಂದಪ್ಪ… //2// ಯಗ್ನದ ಕುರಿಯಾದನು ನಮ್ಮ ಪಾಪಕ್ಕಪ್ಪ, ಜಜ್ಜಿ ಹೋದ ನಮಗಾಗಿ ಈ ಯೇಸಪ್ಪ… //2// ಯೇಸು ಯೇಸು ನನ್ನ ತಂದೆಯಪ್ಪ, ಅವರೇ ನನಗೆ ಎಂದೂ ಸಕಲವಪ್ಪ… //2// ಪಾಪ ಕೊಡುವ ಸಂಬಳವೂ ಮರಣವಪ್ಪ, ಒಪ್ಪಿಸು ನಿನ್ನ ಪಾಪವೆಲ್ಲ ಯೇಸುವಿಗಪ್ಪ… //2// ಕಲ್ವಾರಿ ರಕ್ತದಲ್ಲಿ ಬಿಡುಗಡೆಯಪ್ಪ, ತಾಯಿಯಂತೆ ಸಂತೈಯಿಸುವ ಈ ಯೇಸಪ್ಪ… //2// ಯೇಸು ಯೇಸು ನನ್ನ ತಂದೆಯಪ್ಪ, ಅವರೇ ನನಗೆ ಎಂದೂ ಸಕಲವಪ್ಪ… //2// ಪ್ರತಿಯೊಂದು ನಾಲಿಗೆ ಹರಸುವುದಪ್ಪ, ಬಾಗಬೇಕು ಮೊಣಕಾಲೂ ಯೇಸುಗಪ್ಪ… //2// ಅಪ್ಪಿಕೊಂಡು ಮುತ್ತಿಸುವ ಕುರುಬನ್ನಪ್ಪ, ಮಾರ್ಗ ಸತ್ಯ ಜೀವವೂ ಈ ಯೇಸಪ್ಪ… //2//