ಯೇಸು ಯೇಸು ಯೇಸು

ಕನ್ನಡ

ಯೇಸು ಯೇಸು ಯೇಸು ನನ್ನ ಪ್ರೀಯಾ ಯೇಸು || ನೀನು ಇಲ್ಲದ ಈ ಜೀವಿತ ಕತ್ತಲೆಯಾಗಿತ್ತು ರಾಜಾ ಕಹಿಯಾಗಿ ಹೋಯಿತು ಹ…..ಲ್ಲೆಲೂಯಾ || 4 || 1 ) ನಾನು ನಿನ್ನನ್ನು ಹುಡುಕಿ ಬರಲಿಲ್ಲ ನೀನೇ ನನ್ನನ್ನು ಹುಡುಕಿ ಬಂದೆ || ಎಷ್ಟೊಂದು ಅಕ್ಕರೆ ನೀ ತೋರಿಸಿದೆ ಓ ನನ್ನ ಪ್ರಿಯಾ ಯೇಸು || 2 ) ನಿನ್ನ ಪುನರುತ್ಥಾನದ ಶಕ್ತಿಯಿಂದ ಸತ್ತಂತ ನನ್ನನ್ನು ನೀನೆ ಬದುಕಿಸಿದೆ ಧಾರೆ ಧಾರೆ ಸುರಿದ ನನ್ನ ಕಣ್ಣೀರು ನೀ ಒರೆಸಿ ಸಂತೈಸಿದೆ 3 ) ನೀನು ನನ್ನ ಜೊತೆಯಲ್ಲಿ ಇರುವಾಗ ಹೆದರುವ ಅವಕಾಶ ನನಗೆ ಇಲ್ಲಾ || ವೈರಿಗಳ ಎದುರಿನಲ್ಲಿ ತಲೆ ಎತ್ತಲ್ಪಡುವಂತೆ ಅಭಿಷೇಕ ನೀ ಮಾಡಿದೆ ||