ಯೇಸು ರಾಜ ಜನಿಸಿದ ಲೋಕಕ್ಕೆಲ್ಲಾ ಹರುಷತಂದ ||

ಕನ್ನಡ

ಯೇಸು ರಾಜ ಜನಿಸಿದ ಲೋಕಕ್ಕೆಲ್ಲಾ ಹರುಷತಂದ || ಭೂಲೋಕವ ಪ್ರೀತಿಮಾಡಿ ಮಾನವನಾಗಿ ಅವತರಿಸಿ ಮರಿಯಳ ಗರ್ಭದಿ ಜನಿಸಿ ಬಂದ ತಂದೆ ದೇವರಿಗೆ ಮಹಿಮೆ ಮಹಿಮೆ ಮಹಿಮೆ 1.ಗೋದಲಿಯಲ್ಲಿ ಬಟ್ಟೆಯಿಂದ ಸುತ್ತಿರುವ ಈ ಮಗುವು || ಲೋಕ ರಕ್ಷಕನು ತನ್ನ ಜನರ ಕಾಯ್ವನು || ಉಲ್ಲಾಸದಿ ಸ್ತುತಿಸುವ ಅರಸನು ಜನಿಸಿದ || ಯೇಸು || 2.ನಮ್ಮನ್ನೆಲ್ಲಾ ಪ್ರೀತಿ ಮಾಡಿ || ಧರೆಗಿಳಿದ ಈ ಮಗುವು ಅಂಧಕಾರವ ಓಡಿಸಿ ಜೀವ ಜ್ಯೋತಿಯ ತುಂಬುವನು || ಉಲ್ಲಾಸದಿ ಸ್ತುತಿಸುವ ಅರಸನು ಜನಿಸಿದ || ಯೇಸು ||